ಶ್ರದ್ಧಾ ಕೇಂದ್ರಗಳು ಗಟ್ಟಿಯಾದರೆ ಬದುಕು ಭದ್ರ - ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಶುಭನುಡಿ - ಮೊರಂಗಲ್ಲು ತರವಾಡು ಮನೆಯ ಗೃಹಪ್ರವೇಶ

PTR_31 MAR_6
Published on

ಆಲೆಟ್ಟಿ: ಆರ್ಥಿಕವಾಗಿ, ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೇರುತ್ತಾ ಬಂದಂತೆ ನಮ್ಮ ಸಂಸ್ಕೃತಿ, ಆಚಾರ ವಿಚಾರ, ಗುರುಹಿರಿಯರು, ದೇವರು, ದೈವಗಳನ್ನು ಎಂದೂ ಮರೆಯಬಾರದು. ಮೂಲ ಶ್ರದ್ಧಾ ಕೇಂದ್ರಗಳನ್ನು ಗಟ್ಟಿಗೊಳಿಸಿದರೆ ಬದುಕು ಭದ್ರವಾಗಿ ಸುಂದರವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಆಲೆಟ್ಟಿ ಗ್ರಾಮದ ಮೊರಂಗಲ್ಲು ತರವಾಡು ಮನೆಯ ಗೃಹಪ್ರವೇಶ, ಶ್ರೀ ವೆಂಕಟರಮಣ ದೇವರ ಮುಡಿಪು, ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆಯ ಸಂದರ್ಭ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ನಮ್ಮ ಕುಟುಂಬ ವ್ಯವಸ್ಥೆ, ಒಗ್ಗಟ್ಟು ಎಂದೂ ಬಿಟ್ಟುಕೊಡಬಾರದು. ಕೂಡಿ ಬಾಳಿದಾಗ ದೇವರು ನಮಗೆ ಅನುಗ್ರಹಿಸುತ್ತಾನೆ ಎಂದರು.

ಧಾರ್ಮಿಕ ಸಭೆಯನ್ನು ಕ್ಷೇತ್ರದ ತಂತ್ರಿ ಕುಂಟಾರು ರವೀಶ್ ತಂತ್ರಿ ಉದ್ಘಾಟಿಸಿ, ಧಾರ್ಮಿಕ ಉಪನ್ಯಾಸ ನೀಡಿದರು. ಸಭಾಧ್ಯಕ್ಷತೆಯನ್ನು ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದ ಅಧ್ಯಕ್ಷ ಗುರುಪ್ರಸಾದ್ ರೈ ವಹಿಸಿದ್ದರು.

ಮಾಜಿ ಸಚಿವ ರಮಾನಾಥ ರೈ, ಧಾರ್ಮಿಕ ದತ್ತಿ ಇಲಾಖೆಯ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮೊರಂಗಲ್ಲು ನೇಮೋತ್ಸವ ಸಮಿತಿ ಗೌರವಾಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷೆ ವೀಣಾ ವಸಂತ, ಆಲೆಟ್ಟಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥರಾಮ ಕುಂಚಡ್ಕ, ರಾಮಕೃಷ್ಣ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನಾಯ್ಕ, ವಕೀಲ ಎನ್. ಜಯಪ್ರಕಾಶ್ ರೈ, ಬೆಂಗಳೂರು ಗಣಪತಿ ದೇವಸ್ಥಾನದ ಸಮಿತಿ ಅಧ್ಯಕ್ಷ ಪ್ರಿಯಂದೇವ ರಾಜಪ್ಪ, ಸವಣೂರು ಸೀತಾರಾಮ ರೈ, ಅರಂಬೂರು ವಯನಾಟ್‌ಕುಲವನ್‌ದೈವದ ಉತ್ಸವ ಸಮಿತಿ ಅಧ್ಯಕ್ಷ ಪಿ. ಬಿ. ಸುಧಾಕರ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವರಾಮ ರೈಗುಂಡ್ಯ, ಕುಟುಂಬದ ಹಿರಿಯರಾದ ನವೀನ ಕುಮಾರ ರೈ, ಕುಟುಂಬ ಯಜಮಾನ ಉಮೇಶ್ ಶೆಟ್ಟಿ, ನೇಮೋತ್ಸವ ಸಮಿತಿ ಪ್ರಧಾನ ಸಂಚಾಲಕ ಆಶೀಕ್ ರೈ ಉಪಸ್ಥಿತರಿದ್ದರು.

ಉತ್ಸವ ಸಮಿತಿ ಪ್ರಧಾನ ಸಂಚಾಲಕಿ ಆಶಿತಾ ಪಿ.ಶೆಟ್ಟಿ ವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ಮತ್ತು ದಯಾನಂದ ಪತ್ತುಕುಂಜ ನಿರೂಪಿಸಿದರು.

ದೈವಗಳ ನೇಮೋತ್ಸವ

ಸುದರ್ಶನ ಹೋಮ, ಮೊರಂಗಲ್ಲು ತರವಾಡು ತರವಾಡು ಮನೆ ಪ್ರವೇಶ, ವೆಂಕಟರಮಣ ದೇವರ ಮುಡಿಪು ಪೂಜೆ, ಕಲ್ಲುರ್ಟಿದೈವದ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಶ್ರೀ ಧೂಮಾವತಿ ಸಪರಿವಾರ ದೈವಗಳ ನೇಮೋತ್ಸವ, ಕಟೀಲು ಶ್ರೀದೇವಿಯ ಮೆರವಣಿಗೆ, ಯಕ್ಷಗಾನ ಬಯಲಾಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net