Video: ಸೈಕಲ್​ನಲ್ಲಿ ಬಂದು ಮಗುವನ್ನು ಅಪಹರಿಸಲು ಯತ್ನಿಸಿದ ಮಂಗ!

monkey
Published on

ನವದೆಹಲಿ: ಮಂಗಗಳು ಎಂದ ಕೂಡಲೇ ಒಂದು ಮರದಿಂದ ಇನ್ನೊಂದು ಮರಕ್ಕೆ ಛಂಗನೆ ನೆಗೆಯುತ್ತಾ, ಕಾಯಿ-ಹಣ್ಣುಗಳನ್ನು ಕಿತ್ತುಕೊಂಡು, ಅವನ್ನು ತಿಂದು ಗಿಡವನ್ನು ಹಾಳು ಮಾಡುವುದು ನೆನಪಾಗುತ್ತದೆ. ಕೆಲವೊಮ್ಮೆ ಅವರು ಲಗಾಟೆ ಹೊಡೆಯುವುದನ್ನು ಕಂಡು ಮನದುಂಬಿ ನಕ್ಕಿದ್ದು ನೆನಪಾಗುತ್ತದೆ. ಆದರೆ, ಇಲ್ಲೊಂದು ಮಂಗ ಸಣ್ಣ ಮಗುವನ್ನು ಅಪಹರಿಸಲು ವಿಫಲ ಯತ್ನ ಮಾಡಿರುವ ಸಿನಿಮೀಯ ಘಟನೆ ಚರ್ಚೆಗೆ ಗ್ರಾಸವಾಗಿದೆ.

ತನ್ನ ಮನೆಯ ವಠಾದಲ್ಲಿ ಈ ಮಗು ಇತರೆ ಮಕ್ಕಳೊಂದಿಗೆ ಬೆಂಚಿನ ಮೇಲೆ ಕುಳಿತು ತನ್ನ ಪಾಡಿಗೆ ತಾನು ಆಟವಾಡಿಕೊಂಡಿರುತ್ತದೆ. ಅಷ್ಟರಲ್ಲೇ ತಳ್ಳುಗಾಡಿ ರೀತಿಯ ಗಾಡಿಯಲ್ಲಿ ವೇಗವಾಗಿ ಬರುವ ಮಂಗವೊಂದು ಬೆಂಚಿನ ತುದಿಯಲ್ಲಿ ಕುಳಿತಿದ್ದ ಹೆಣ್ಣುಮಗವಿನ ಬಟ್ಟೆ ಹಿಡಿದೆಳೆದು ಬೀಳಿಸುತ್ತದೆ. ಬಳಿಕ ಆ ಮಗುವಿನ ಬಟ್ಟೆಯನ್ನು ಹಿಡಿದು ದರದರನೆ ಎಳೆಯಲಾರಂಭಿಸುತ್ತದೆ.

ಮಂಗನಾಟದಿಂದ ಬೆದರುವ ಮಗು ಹಾಗೂ ಆಕೆಯ ಜತೆಗಿದ್ದ ಮಕ್ಕಳು ಜೋರಾಗಿ ಕಿರುಚಲು ಆರಂಭಿಸುತ್ತವೆ. ಅಷ್ಟರಲ್ಲೇ ಹಿರಿಯರೊಬ್ಬರು ಓಡೋಡಿ ಬಂದು ಮಂಗವನ್ನು ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ಅಷ್ಟರಲ್ಲೇ ಆ ಮಂಗ ಮಗುವನ್ನು ಬಿಟ್ಟು ಪರಾರಿಯಾಗುತ್ತದೆ. ಬಳಿಕ ಆ ಮಗು ಎದ್ದು, ತಾನಿದ್ದ ಸ್ಥಳಕ್ಕೆ ಮರಳುತ್ತದೆ.

ಸಾರ್ವಜನಿಕರೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಪ್ರಕಟಿಸಿದ್ದು, ಭಾರಿ ವೈರಲ್​ ಆಗಿದೆ. ಕೆಲವು ಟ್ವೀಟಗರು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿ, ಮಂಗದ ಕತ್ತಿನ ಪಟ್ಟಿ ಹಿಡಿದು ಯಾರೋ ಅದನ್ನು ನಿಯಂತ್ರಿಸುತ್ತಿದ್ದಂತೆ ಕಾಣುತ್ತದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net