

| ಹೊಮನ್ ಸಿಂದಗಿ ವಿಜಯಪುರ
ಪಿಪಿಎಫ್ನಲ್ಲಿ ಉಳಿತಾಯದ ಹಣಕ್ಕೆ ತೆರಿಗೆ ಇರುವುದಿಲ್ಲ. ಇನ್ನು ಪಿಪಿಎಫ್ ಜತೆ ಆರ್ಡಿ ಖಾತೆ ಆರಂಭಿಸಿ ಸಾಧ್ಯವಾದಷ್ಟು ಉಳಿತಾಯ ಮಾಡುತ್ತಾ ಹೋಗಿ. ಮದುವೆಯ ಖರ್ಚಿಗೆ ನೆರವಾಗುತ್ತದೆ. ಜೀವ ವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಿಕೊಳ್ಳಿ. ನಿಮ್ಮ ತಂದೆ, ತಾಯಿ ಮತ್ತು ನಿಮಗೆ ಒಳಗೊಂಡಂತೆ ಒಂದು ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಮಾಡಿಸುವ ಬಗ್ಗೆ ಚಿಂತಿಸಬಹುದು. ನೀವು ಹೂಡಿಕೆಯಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳ ಬಯಸಿದಲ್ಲಿ ಮ್ಯೂಚುವಲ್ ಫಂಡ್ ಎಸ್ ಐಪಿಯಲ್ಲಿ ಹೂಡಿಕೆ ಮಾಡಬಹುದು.
ನೆನಪಿನಲ್ಲಿಡಿ ನಾನು ಮಾಹಿತಿ ನೀಡಿರುವುದು ಸಂಭಾವ್ಯ ಸಾಧ್ಯತೆಗಳ ಬಗ್ಗೆ ಮಾತ್ರ. ಹೂಡಿಕೆ ಮಾಡುವ ಮುನ್ನ ಸಾಕಷ್ಟು ಮಾಹಿತಿ ಕಲೆಹಾಕಿ ನಿಮಗೆ ಆರ್ಥಿಕ ಪರಿಸ್ಥಿತಿಗೆ ಸರಿಹೊಂದುವ ಕಡೆ ಹಣ ತೊಡಗಿಸಿ. ಇನ್ನು ಕಂಟ್ರಾಕ್ಟರ್ ಕೆಲಸದ ವಿಚಾರಕ್ಕೆ ಬಂದರೆ ಅಗತ್ಯ ಸಂಪನ್ಮೂಲ ಮತ್ತು ಲೈಸೆನ್ಸ್ ಇದ್ದರೆ ನೀವು ಆರಂಭಿಸಬಹುದು. ಕಂಟ್ರಾಕ್ಟರ್ ಕೆಲಸಕ್ಕೆ ಕೈ ಹಾಕಿ ಫೋಟೋ ಸ್ಟುಡಿಯೋದತ್ತ ಗಮನಹರಿಸದೇ ಇರಬೇಡಿ. ಸಾಧ್ಯವಾದರೆ ಫೋಟೋ ಸ್ಡುಡಿಯೋ ನಿರ್ವಹಣೆಗೆ ಒಬ್ಬ ಒಳ್ಳೆ ಹುಡುಗನಿಗೆ ಜವಾಬ್ದಾರಿ ಕೊಡಿ. ನಿಮಗೆ ಶುಭವಾಗಲಿ.
ಫೈನಾನ್ಶಿಯಲ್ ಫ್ರೀಡಂ ಕಾರ್ಯಾಗಾರ
ಇಂಡಿಯನ್ ಮನಿ ಡಾಟ್ ಕಾಂ ಸಿಇಒ ಸಿ ಎಸ್ ಸುಧೀರ್ ಸಾರಥ್ಯದಲ್ಲಿ ಒಂದು ದಿನದ ಫೈನಾನ್ಶಿಯಲ್ ಫ್ರೀಡಂ ( ಹಣಕಾಸು ಸ್ವಾತಂತ್ರ್ಯ) ಕಾರ್ಯಾಗಾರ ಫೆಬ್ರವರಿ 2 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ, ಹೂಡಿಕೆ, ತೆರಿಗೆ ನಿರ್ವಹಣೆ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಛಿಸುವವರು 8655097256 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ.