1953ರ ಜನವರಿ 8ರಂದು ತಿರುವನಂತಪುರದ ಪೂಜಪುರದಲ್ಲಿ ಜನಿಸಿದ ವಿಜಯಶ್ರೀ, ಕೇವಲ 13ನೇ ವಯಸ್ಸಿನಲ್ಲೇ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು. 1966ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ 'ಚಿಟ್ಟಿ' ಮೂಲಕ ಬಾಲನಟಿಯಾಗಿ ಕಾಣಿಸಿಕೊಂಡ ಅವರು ಬಳಿಕ ತಮಿಳು, ತೆಲುಗು ಸೇರಿ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. 1969ರಲ್ಲಿ ಮಲಯಾಳಂ 'ಪೂಜಾಪುಷ್ಪಂ' ನಟಿಸಿ, ಮಾಲಿವುಡ್ ಸಿನಿರಸಿಕರಿಗೆ ಪರಿಚಿತರಾದರು. ಇಲ್ಲಿಂದ ಅವರ ಸಿನಿ ಕರಿಯರ್ ಇನ್ನಷ್ಟು ವೇಗವಾಗಿ ಓಡಲಾರಂಭಿತು. 'ಲಂಕಾ ದಹನಂ', 'ಟ್ಯಾಕ್ಸಿ ಕಾರ್', 'ಅರೋಮಲುಣ್ಣಿ', 'ಪೋಸ್ಟ್‌ಮ್ಯಾನ್ ಕಣ್ಣನಿಲ್ಲ' ಮತ್ತು 'ಅಂಗತಟ್ಟು' ಸೇರಿದಂತೆ ಹಲವು ಚಿತ್ರಗಳು ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತು.