ಇತ್ತೀಚಿನ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಶಕೀಲಾ, ನಾನು ಸಂಪಾದಿಸಿದ ಬಹುತೇಕ ಹಣ ಇಂದು ನನ್ನ ಅಕ್ಕನ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ವ್ಯಂಗ್ಯವಾಗಿ ಹೇಳಿದರು. ಆಕೆ ಸಂತೋಷದಿಂದ ಜೀವನ ನಡೆಸುತ್ತಿದ್ದಾಳೆ. ನನ್ನವಳೇ ನನಗೆ ಹೆಚ್ಚು ದ್ರೋಹ ಮಾಡಿದ್ದಾಳೆ. ಅವಳು ಆರಂಭದಲ್ಲಿ ನನ್ನ ನೋಡಲು ಬರುತ್ತಿರಲಿಲ್ಲ ಎಂಬ ದುಃಖ ನನ್ನಲ್ಲಿತ್ತು. ಆದರೀಗ, ಅವಳು ವಾಪಾಸ್ ಬರದೆ ಇರೋದೇ ಒಳ್ಳೆಯದು. ಅದನ್ನೇ ದೇವರಲ್ಲಿ ಕೇಳಿಕೊಳ್ಳುವೆ. ಕಾರಣ, ಅವಳಿಗೆ ಇನ್ನು ಮುಂದೆ ಕೊಡಲು ನನ್ನ ಬಳಿ ಹಣವೂ ಇಲ್ಲ. ಜತೆಯಲ್ಲಿದ್ದವರು ನನ್ನ ಯೋಗಕ್ಷೇಮಕ್ಕಿಂತ, ನಾನು ಸಂಪಾದಿಸಿದ್ದ ಹಣದ ಮೇಲೆಯೇ ಹೆಚ್ಚು ಕಣ್ಣಾಕಿದ್ದರು ಎಂದಿದ್ದಾರೆ.