

ನವದೆಹಲಿ: ( Mohammed Shami ) ಗಾಯದ ಸಮಸ್ಯೆಯಿಂದ 14 ತಿಂಗಳ ಕಾಲ ಹೊರಗುಳಿದಿದ್ದ ಮೊಹಮ್ಮದ್ ಶಮಿ ಅಂತಿಮವಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಇಈದಗ ಅವರ ಕುರಿತಾದ ಇಂಡ್ರಸ್ಟಿಂಗ್ ಸಂಗತಿಯೊಂದು ವೈರಲ್ ಆಗುತ್ತಿದೆ.
ಅನುಭವಿ ಬೌಲರ್ ಗಾಯದಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಂಡರು. ಶಮಿ ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಬಂಗಾಳವನ್ನು ಪ್ರತಿನಿಧಿಸುವ ಮೂಲಕ ಕ್ರಿಕೆಟ್‌ಗೆ ಮರಳಿದರು. ಇದೀಗ ಬಂಗಾಳ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ಕೋಚ್ ಶಿಬ್ ಶಂಕರ್ ಪಾಲ್ ಅವರ ಬಗ್ಗೆ ಒಂದು ದೊಡ್ಡ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ಬಂಗಾಳ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ಕೋಚ್ ಶಿಬ್ ಶಂಕರ್ ಪಾಲ್ ಸಂದರ್ಶನದಲ್ಲಿ ಮಾತನಾಡಿ, ವೇಗದ ಬೌಲರ್ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಮೊಹಮ್ಮದ್ ಶಮಿ ಹಿಂತಿರುಗಲು ತುಂಬಾ ಉತ್ಸುಕನಾಗಿದ್ದನು. 30 ರಿಂದ 45 ನಿಮಿಷಗಳ ಕಾಲ ಬೌಲ್ ಮಾಡಲು ಇಷ್ಟಪಡುತ್ತಾರೆ. ದೇಶೀಯ ಟಿ 20 ಪಂದ್ಯಗಳಲ್ಲಿ ತಂಡವು ಆಗಮಿಸುವ ಮೊದಲು ಪಂದ್ಯದ ದಿನಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಮೈದಾನವನ್ನು ತಲುಪಿದ ಮೊದಲ ಆಟಗಾರ ಎಂದಿದ್ದಾರೆ.
ಬಿರಿಯಾನಿ ಬಿಟ್ಟಿದ್ದಾರೆ !
ಕೋಚ್ ಕೂಡ ಹೇಳಿದರು.. ಅವರು ಕಟ್ಟುನಿಟ್ಟಾದ ಡಯಟ್‌ನಲ್ಲಿದ್ದಾರೆ. ಅವನು ದಿನಕ್ಕೆ ಒಮ್ಮೆ ತಿನ್ನುವುದನ್ನು ನಾನು ನೋಡಿದೆ. ಅವರು ಬಿರಿಯಾನಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಕಳೆದ ಎರಡು ತಿಂಗಳಿಂದ ಬಿರಿಯಾನಿ ತಿನ್ನುವುದನ್ನು ನಾನು ನೋಡಿಲ್ಲ. ತನ್ನ ನೆಚ್ಚಿನ 'ಬಿರಿಯಾನಿ'ಯನ್ನು ತ್ಯಜಿಸಿದ್ದಾರೆ. ದಿನಕ್ಕೊಂದು ಬಾರಿ ಊಟ ಮಾಡುತ್ತಾರೆ. ಕಟ್ಟುನಿಟ್ಟಿನ ಡಯಟ್ ಅನುಸರಿಸುತ್ತಿದ್ದಾರೆಂದು ಹೇಳಿದ್ದಾರೆ.
ಶಮಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ 2023ರ ಏಕದಿನ ವಿಶ್ವಕಪ್ ಫೈನಲ್ ಆಗಿತ್ತು. ಇದೀಗ ಶಮಿ ದೇಶಿಯ ಕ್ರಿಕೆಟ್‌ನಲ್ಲಿ ಮಾಡಿದಂತೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಪ್ರಬಲ ಪುನರಾಗಮನವನ್ನು ಮಾಡಲಿದ್ದಾರೆ ಎಂದು ಇಡೀ ತಂಡದ ಆಡಳಿತವು ಭರವಸೆ ಹೊಂದಿದೆ.