ಗುಜರಾತ್​ನ ಯುವಜನತೆ ಜಾತಿವಾದ ರಾಜಕಾರಣಕ್ಕೆ ತಕ್ಕ ಶಾಸ್ತಿ ಮಾಡಿದ್ದಾರೆ; ಪ್ರಧಾನಿ ಮೋದಿ

Modi
Published on

ನವದೆಹಲಿ: ಯುವಜನತೆಗೆ ಬಿಜೆಪಿ ಮೇಲೆ ಭರವಸೆ ಇದೆ. ಹೀಗಾಗಿ ಜಾತಿವಾದ ರಾಜಕಾರಣಕ್ಕೆ ತಕ್ಕ ಪಾಠವನ್ನು ರಾಜ್ಯದ ಯುವಜನತೆ ಕಲಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಗುಜರಾತ್​​ನಲ್ಲಿ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದ ಸಂಭ್ರಮದಲ್ಲಿರುವ ಮೋದಿ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದರು.

ಗುಜರಾತ್​ನಲ್ಲಿ ಜಾತಿ, ಮತ, ವರ್ಗಗಳನ್ನು ಮೀರಿ ಜನತೆ ಬಿಜೆಪಿಗೆ ಮತ ನೀಡಿದ್ದಾರೆ. ಈ ಗೆಲುವಿಗೆ ಕಾರಣರಾದ ಗುಜರಾತಿಗಳಿಗೆ ನಾನು ಮತ್ತೊಮ್ಮೆ ಭರವಸೆ ನೀಡುತ್ತಿದ್ದೇನೆ. ಬಿಜೆಪಿ ಸರ್ಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮೋದಿ ಹೇಳಿದರು.

ಭಾರತ ಅಮೃತಕಾಲದ ಪ್ರವೇಶ ಮಾಡುತ್ತಿದೆ. ದಲಿತರು, ಬಡವರು, ಶೋಷಿತ ವರ್ಗದ ಸಮಗ್ರ ಅಭಿವೃದ್ಧಯಿಂದಾಗಿ ಗುಜರಾತ್​ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಪ್ರಚಂದ ಗೆಲುವು ದೇಶದಲ್ಲಿ ಹೊಸ ಭಾಷ್ಯ ಬರೆದಿದೆ. ಈ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವೇ ಕಾರಣ ಎಂದು ಮೋದಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net