ಕರೊನಾ ಎಮರ್ಜೆನ್ಸಿ : ದೇಶದ ವೈದ್ಯರು, ಔಷಧಿ ಕಂಪೆನಿಗಳೊಂದಿಗೆ ಮೋದಿ ಸಭೆ

modi
Published on

ನವದೆಹಲಿ : ದೇಶದಲ್ಲಿ ಕರೊನಾ ಸನ್ನಿವೇಶವು ಬಿಗಡಾಯಿಸುತ್ತಿರುವ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಭಾಗಗಳ ಹಿರಿಯ ವೈದ್ಯರೊಂದಿಗೆ ಮತ್ತು ಪ್ರಮುಖ ಔಷಧಿ ಕಂಪೆನಿಗಳೊಂದಿಗೆ ಇಂದು ಗಂಭೀರ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಸಂಜೆ 4.30 ಕ್ಕೆ ವೈದ್ಯರೊಂದಿಗೆ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಮಾತನಾಡಲಿದ್ದು, 6 ಗಂಟೆಗೆ ಫಾರ್ಮ ಕಂಪೆನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ. ದೇಶದಲ್ಲಿ ಕರೊನಾ ಸೋಂಕು ಹೆಚ್ಚಿ ವೈದ್ಯಕೀಯ ಶುಶ್ರೂಷೆಯ ಅಗತ್ಯ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮೋದಿ ಅವರ ಈ ಸಭೆಗಳು ಹೆಚ್ಚಿನ ಮಹತ್ವ ಹೊಂದಿವೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net