ಬೆಂಗಳೂರು: ದೇಶವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಂತಹ ಕಾಯಕಯೋಗಿ ಮತ್ತೊಬ್ಬರಿಲ್ಲ ಎಂದು ಅಧ್ಯಾತ್ಮ ಚಿಂತಕ ಸದ್ಗುರು ಮಧುಸೂದನ್ ಸಾಯಿ ಹೇಳಿದ್ದಾರೆ.
ಜಯನಗರದ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್. ಬಾಲಸುಬ್ರಹ್ಮಮಣ್ಯಂ ರಚನೆಯ “ಪವರ್ ವಿದಿನ್- ದಿ ಲೀಡರ್ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತ್ಯಾಗ, ಸೇವೆ ಮೂಲಕ ನಾಯಕತ್ವ ಗುಣ ಬೆಳೆಸಿಕೊಂಡಿರುವ ಮೋದಿ, ವಿಶ್ವಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ದೇಶದ ಅಭಿವೃದ್ಧಿಗೆ ತನ್ನದೆ ಕನಸುಗಳನ್ನು ಹೊತ್ತಿದ್ದಾರೆ. 10 ವರ್ಷಗಳಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದರು. ಆಧ್ಯಾತ್ಮಿಕ ಟೀಮ್ಲೀಸ್ ಸರ್ವೀಸ್ ಕಂಪನಿ ಉಪಾಧ್ಯ ಮನೀಶ್ ಸರ್ಬವಾಲ್, ಹಿರಿಯ ಪತ್ರಕರ್ತ ಅನಂದ್ ನರಸಿಂಹನ್ ಮತ್ತಿತರರಿದ್ದರು.
ನಾಯಕತ್ವವೇ ದೊಡ್ಡ ಗುಣ:
“ಸಬ್ ಕಾ ಸಾಥ್ ಸಬ್ ಕಾ ವಿಕಾಸ್.. ಸಬ್ ಕಾ ವಿಶ್ವಾಸ್ ಸಬ್ ಕಾ ಪ್ರಯಾಸ್’ ಪರಿಕಲ್ಪನೆಯಡಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಗುಣ ಅವರಲ್ಲಿದೆ. ಎಲ್ಲರ ಮಾತನ್ನು ಶಾಂತವಾಗಿ ಆಲಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಹಾನ್ ನಾಯಕ ಪರರಿಗಾಗಿ ಬದುಕುತ್ತಾನೆ, ಈ ಗುಣ ಮೋದಿಯವರಲ್ಲಿದೆ. ಈ ಪುಸ್ತಕದಲ್ಲಿ ಅವರ ಕುರಿತು ಕುತೂಹಲಕಾರಿ ಅಂಶಗಳಿವೆ. ಅಲ್ಲದೆ, ದೇಶದ ಇತಿಹಾಸ, ಪರಂಪರೆ, ಸಂಸತಿ ಬಗ್ಗೆ ಅಂಶಗಳಿವೆ ಎಂದು ತಿಳಿಸಿದರು. ಮೋದಿಯವರಲ್ಲಿ ಕಲಿಯುವಂತಹ ಗುಣ ಇದೆ. ಲೇಖಕ ಬಾಲಸುಬ್ರಮಣ್ಯಂ ಅವರು ಮೋದಿ ಅವರ 50 ವರ್ಷಗಳ ಸಾರ್ವಜನಿಕ ಜೀವನವನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. ಪ್ರಧಾನಿ ಅವರ ಪಟ್ಟುಬಿಡದ ಪ್ರಯತ್ನ, ಕಠಿಣ ಪರಿಶ್ರಮ, ಸಂವಹನ ವಿಧಾನದ ಮೂಲಕ ಬೆಳಕು ಚೆಲ್ಲುತ್ತದೆ. ಹೀಗಾಗಿ, ಸಾರ್ವಜನಿಕ ಸೇವೆಯ ಜೀವನವನ್ನು ಬಯಸುವವರಿಗೆ ಪುಸ್ತಕ ಪ್ರೇರಣೆ ನೀಡುತ್ತದೆ ಎಂದು ಮಧುಸೂಧನ್ ಸಾಯಿ ವಿವರಿಸಿದರು.
ಹಿಂದೂ ಸಮಾಜದಲ್ಲಿನ ತಾರತಮ್ಯ ಬಗ್ಗೆ ಪೇಜಾವರ ಶ್ರೀ ಮಾತನಾಡಲಿ ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಆಗ್ರಹ
ಪುಸ್ತಕ ಬರೆಯಲು 2 ವರ್ಷ ತೆಗೆದುಕೊಂಡೆ. ಆನೇಕ ಸಂಶೋಧನೆ ನಡೆಸಿ ಪುಸ್ತಕವನ್ನು ರಚಿಸಿದ್ದೇನೆ. ಬರೀ ಪ್ರಕಟಣೆಗಾಗಿ ಪುಸ್ತಕ ಬರೆಯಬಾರದು, ಓದುಗರಿಗಾಗಿ ಬರೆಯಬೇಕು. ಪ್ರಧಾನಿ ನರೇಂದ್ರ ಮೋದಿ ತರಹದವರ ನಾಯಕತ್ವ ದೇಶಕ್ಕೆ ಅತ್ಯಗತ್ಯ. ಪುಸ್ತಕ ಕುರಿತು ಬರುವ ಟೀಕೆ, ಟಿಪ್ಪಣೆಯನ್ನು ಮುಕ್ತವಾಗಿ ಸ್ವೀಕರಿಸುವೆ.
| ಡಾ.ಆರ್. ಬಾಲಸುಬ್ರಮಣ್ಯಂ, ಕೃತಿಯ ಲೇಖಕ.