ಮೇಕೆ ಬಂಡಿಯಲ್ಲಿ ಬಂದ ಮೋದಿ ಅಭಿಮಾನಿ: ವಿಡಿಯೋ ವೈರಲ್ | Goat Cart

Bbau - 2025-11-06T214912.534
Published on

ಬಿಹಾರ: ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭಾಗಲ್ಪುರದ ಹವಾಯಿ ಅಡ್ಡಾ ಮೈದಾನದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ವಿಚಿತ್ರವಾದರೂ ತಮಾಷೆಯ ಘಟನೆಯೊಂದು ನಡೆದಿದೆ.

ಹೌದು, ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪ್ರಧಾನಿ ಮೋದಿಯವರ ರ್ಯಾಲಿಗೆ ವ್ಯಕ್ತಿಯೊಬ್ಬ ಮೇಕೆ ಬಂಡಿಯಲ್ಲಿ(Goat Cart) ಬಂದಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಮೇಕೆ ಬಂಡಿ ಸವಾರಿ ಮಾಡುತ್ತಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಾಜಕೀಯ ಕಾರ್ಯಕ್ರಮಕ್ಕಾಗಿ ನೆರೆದಿದ್ದ ಸಾವಿರಾರು ಬೆಂಬಲಿಗರಲ್ಲಿ ಈ ಅಸಾಮಾನ್ಯ ದೃಶ್ಯವು ಬೇಗನೆ ಗಮನ ಸೆಳೆಯಿತು.

ನಾನು ಮೋದಿ ಜೀ ಬಿಗ್​ ಫ್ಯಾನ್​

ವರದಿಗಳ ಪ್ರಕಾರ, ಪ್ರಕಾಶ್ ಮಂಡಲ್ ಎಂಬ ವ್ಯಕ್ತಿ ಗೋಪಾಲ್‌ಪುರ ವಿಧಾನಸಭಾ ಕ್ಷೇತ್ರದ ಚಹಾ ಮಾರಾಟಗಾರರಾಗಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯವರ ನಿಷ್ಠಾವಂತ ಅನುಯಾಯಿ ಮತ್ತು ಅವರ ಆಡುಗಳು ಅವರಿಗೆ ತುಂಬಾ ಪ್ರಿಯವಾದ ಕಾರಣ ತಮ್ಮೊಂದಿಗೆ ತಂದಿದ್ದಾರೆ ಎಂದು ವರದಿಯಾಗಿದೆ.

"ನಾನು ಮೋದಿ ಜೀ ಅವರ ದೊಡ್ಡ ಅಭಿಮಾನಿಯಾಗಿರುವಂತೆಯೇ, ನನ್ನ ಮೇಕೆ ಕೂಡ ಅಷ್ಟೇ. ಮೋದಿ ಜೀ ಅದನ್ನು ಒಮ್ಮೆ ನೋಡಿದರೆ, ಅದು ನನಗೆ ಹೆಮ್ಮೆ ತರುತ್ತದೆ" ಎಂದು ಪ್ರಕಾಶ್ ಮಂಡಲ್ ಹೇಳಿದರು.

ನ.11ರಂದು ಬಿಹಾರದ ಎರಡನೇ ಹಂತದ ಮತದಾನ ನಡೆಯಲಿದ್ದ, ಇಂದು ಮೋದಿ ಬೃಹತ್​ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net