ಇದ್ದಕ್ಕಿದ್ದಂತೆ ಜೇಬಿನಿಂದ ಬಂದ ಹೊಗೆ: ಮೊಬೈಲ್​ ಹೊರ ತೆಗೆಯುತ್ತಿದ್ದಂತಯೇ ಬ್ಲಾಸ್ಟ್​​​, ಕ್ಷಣಾರ್ಧದಲ್ಲಿ ನಡೆದ ಘಟನೆ

mobile phone
ಸಾಂದರ್ಭಿಕ ಚಿತ್ರ
Published on

ಅಲಿಗಢ: ಜೇಬಿನಿಂದ ಹೊಗೆ ಬಂದಿದ್ದನ್ನು ಕಂಡು ಉದ್ಯಮಿಯೊಬ್ಬ ಮೊಬೈಲ್ ಹೊರತೆಗೆಯುತ್ತಿದ್ದಂತೆ ಬ್ಲಾಸ್ಟ್ ಆಗಿರುವ ಘಟನೆ ಉತ್ತರಪ್ರದೇಶದ ಅಲಿಗಢದದಲ್ಲಿ ನಡೆದಿದೆ.

ಘಟನೆಯಲ್ಲಿ ಪ್ರೇಮ್ ರಾಜ್ ಸಿಂಗ್ ಎಂಬುವರು ಗಾಯಗೊಂಡಿದ್ದು, ಸುಮಾರು ಮೂರು ವರ್ಷಗಳ ಹಿಂದೆ ಖರೀದಿಸಿದ ಫೋನ್​ನ್ನು ತನ್ನ ಜೇಬಿನಲ್ಲಿಟ್ಟುಕೊಂಡಿದ್ದ. ಈ ವೇಳ ಜೇಬಿನಲ್ಲಿ ಏನೋ ಬಿಸಿಯಾದ ಅನುಭವವಾಗಿದ್ದು, ಕೂಡಲೇ ಜೇಬಿನಿಂದ ಹೊಗೆ ಬರಲು ಆರಂಭಿಸಿದೆ.
ತಕ್ಷಣವೇ ಪ್ರೇಮ್​ರಾಜ್​ ಮೊಬೈಲ್​ನ್ನು ಹೊರತೆಗೆಯಲು ಯತ್ನಿಸಿದ್ದು, ಅದು ಬ್ಲಾಸ್ಟ್​​ ಆಗಿದೆ. ಪರಿಣಾಮವಾಗಿ ಆತನ ಎಡಗೈ ಹೆಬ್ಬೆರಳು ಮತ್ತು ತೊಡೆಯ ಮೇಲೆ ಸುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಸ್ಥಿತಿ ಉತ್ತಮವಾಗಿದೆ.

ಇದನ್ನೂ ಓದಿ: ಅಪರಿಚಿತರಿಂದ ಲಿಫ್ಟ್ ತೆಗೆದುಕೊಳ್ಳಲು ಹೋಗಿ 13 ಗ್ರಾಂ ಚಿನ್ನದ ಸರ ಕಳೆದುಕೊಂಡ ಮಹಿಳೆ..!

ಈ ಕುರಿತು ಮಾತನಾಡಿರುವ ಗಾಯಾಳು, ತಾನು ಹಲವು ವರ್ಷಗಳಿಂದ ಅದೇ ಬ್ರಾಂಡ್ ಅನ್ನು ಬಳಸುತ್ತಿದ್ದೇನೆ. ಆದರೆ ಘಟನೆಯ ನಂತರ, ನಾನು ಕಂಪನಿಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ. ದೊಡ್ಡ ಅನಾಹುತವಾಗದಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ. ಈ ಕುರಿತು ಮಹುವಾ ಖೇರಾ ಪೊಲೀಸ್ ಠಾಣೆಯಲ್ಲಿ ಫೋನ್​ ತಯಾರಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಮೊಬೈಲ್ ಫೋನ್ ಸ್ಫೋಟಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವೀಡಿಯೋ ನೋಡುತ್ತಿದ್ದಾಗ ಮೊಬೈಲ್ ಬ್ಲಾಸ್ಟ್ ಆಗಿ ತಿರುವನಂತಪುರದಲ್ಲಿ 8ರ ಬಾಲಕಿ ಮೃತಪಟ್ಟಿದ್ದಳು. ಪ್ರಯಾಣಿಕನ ಮೊಬೈಲ್ ಬ್ಲಾಸ್ಟ್ ಆದ ಪರಿಣಾ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಹೀಗೆ ಅನೇಕ ಘಟನೆಗಳು ಬ್ಲಾಸ್ಟ್​​ಗೆ ಸಂಬಂಧಿಸಿದ್ದಿ, ಮೊಬೈಲ್​ ಬಳಸುವಾಗ ಎಚ್ಚರದಿಂದ ಇರುವುದು ಅತ್ಯಗತ್ಯವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net