

ಮಂಗಳೂರು : ದೈಹಿಕ ಕ್ಷಮತೆ ಆಧುನಿಕ ಜೀವನ ಶೈಲಿಯಲ್ಲಿ ಅತ್ಯಂತ ಪ್ರಮುಖವಾಗಿದೆ. ಅದನ್ನು ಬೇರೆಲ್ಲೂ ಪಡೆಯಲು ಸಾಧ್ಯವಿಲ್ಲ. ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸದೃಢವಾಗಿರಲು ದೈಹಿಕ ವ್ಯಾಯಾಮದ ಅಗತ್ಯವಿದೆ. ಎಲ್ಲ ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ನಾತಕೋತ್ತರ ವಿಭಾಗಗಗಳ ಸಂಯೋಜಕರಾದ ಪ್ರೊ.ಗಣಪತಿ ಗೌಡ, ಪ್ರೊ.ರಾಮಕೃಷ್ಣ, ಪ್ರೊ.ಅಬೂಬಕ್ಕರ್ ಸಿದ್ಧಿಕ್, ಪ್ರೊ.ಜಯವಂತ್ ನಾಯಕ್, ಡಾ. ಸಂಜಯ್ ಅಣ್ಣಾರಾವ್, ಡಾ. ನಾಗರತ್ನ ರಾವ್, ಪ್ರೊ.ಯತೀಶ್ ಕುಮಾರ್, ಡಾ.ಮೀನಾಕ್ಷಿ ಎಂ. ಎಂ., ಡಾ. ಸುಮಾ ಟಿ. ಆರ್. ಉಪಸ್ಥಿತರಿದ್ದರು.