

ಬೆಂಗಳೂರು: ವಿಧಾನ ಪರಿಷತ್ನಲ್ಲಿ ನಿನ್ನೆ ನಡೆದ ಗದ್ದಲದ ನಡುವೆ ಸದಸ್ಯ ಆಯನೂರು ಮಂಜುನಾಥ್ ಅವರ ಶರ್ಟ್ ಬಟನ್ ಕಿತ್ತು ಹೋಗಿತ್ತಂತೆ. ಬಿಗುವಾಗಿದ್ದ ಪ್ರಸಂಗದ ಕಾರಣ ಬಿಗುವಿನ ವಾತಾವರಣ ತಿಳಿಗೊಳಿಸಲು ಮತ್ತು ಮುಜುಗರ ತಪ್ಪಿಸುವುದಕ್ಕೆ ಪ್ರಯತ್ನಿಸಿದ್ದನ್ನು ಆಯನೂರು ಮಂಜುನಾಥ್ ಅವರು ಮಾಧ್ಯಮದವರ ಎದುರು ಹೇಳಿಕೊಂಡಿದ್ದಾರೆ.
ಸವದಿ ಕಚೇರಿಯಲ್ಲಿ ಊಟ ವಿಧಾನ ಪರಿಷತ್ಗೆ ಬಂದಿದ್ದ ಬಿಜೆಪಿ ಸದಸ್ಯರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕಚೇರಿಯಲ್ಲಿ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಇವತ್ತು ನಾನ್ವೆಜ್ ಊಟ ಹಾಕಿಸಬೇಕಿತ್ತು ಎಂದು ಕೆಲ ಸದಸ್ಯರು ಗೇಲಿ ಮಾಡಿದ್ದೂ ನಡೆಯಿತು.
ಅಂಗಿಯ ಒಂದು ಗುಂಡಿ ಕಿತ್ತುಕೊಂಡು ಹೋದ ಕಾರಣ ಮುಜುಗರವಾಗಿತ್ತು. ಸುತ್ತಮುತ್ತ ಪಕ್ಷದ ಇತರೆ ಸದಸ್ಯರಿದ್ದರು. ಮುಜುಗರದಿಂದ ಪಾರಾಗುವುದಕ್ಕಾಗಿ ಅವರ ಬಳಿ, 'ಸಚಿವ ಮಾಧುಸ್ವಾಮಿ' ಅವರು ಶರ್ಟ್ ಗುಂಡಿ ಇದ್ದರೂ ಹಾಕುವುದಿಲ್ಲ. ನನ್ನ ಪರಿಸ್ಥಿತಿ ಅದಲ್ಲವಲ್ಲ' ಎಂದು ಹೇಳಿಕೊಂಡು ನನಗೆ ನಾನೇ ಸಮಾಧಾನ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೆ ಎಂದು ಆಯನೂರು ಹೇಳಿಕೊಂಡರು.
ರಾತ್ರಿಯಿಡಿ ಎಲ್ಲವನ್ನು ಓದಿ ನಿಯಮಾವಳಿ ಪ್ರಕಾರವೇ ನಮ್ಮ ಹಕ್ಕು ಮಂಡನೆ ಮಾಡುವ ಸುಧೀರ್ಘ ಪತ್ರವನ್ನು ಸಿದ್ಧಪಡಿಸಲಾಗಿತ್ತು. ಸಭಾಪತಿ ತೆಗೆದುಕೊಳ್ಳಬಹುದಾದ ತೀರ್ಮಾನದ ಅಂದಾಜಿನಲ್ಲಿಯೇ ಸಭಾ ನಡವಳಿಕೆ ಮತ್ತು ಸದನ ಕಲಾಪ ನಿಯಾಮವಳಿಗಳ ಅಧ್ಯಯನ ಮಾಡಿದ್ದು, ಅದರ ಆಧಾರದ ಮೇಲೆ ಸದನದಲ್ಲಿ ವಾದ ಮಂಡಿಸಲು ನಿರ್ಧರಿಸಲಾಗಿತ್ತು. ಆದರೆ, ಅದಕ್ಕೆ ಅವಕಾಶವೇ ಸಿಗದೆ ಹೋಗಿದ್ದು ನೋವಿನ ಸಂಗತಿ. ಅವಿಶ್ವಾಸ ನಿರ್ಣಯ ಬಗ್ಗೆ ಸಭಾಪತಿ ಅವರು ಗೌರವಯುತವಾಗಿ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ, ಅವರ ಹಿಂದೆ ಕಾಂಗ್ರೆಸ್ ರಾಜಕೀಯ ಏನಿದೆ ಎನ್ನುವುದು ಜಗಜ್ಜಾಹೀರಾಯಿತು ಎಂದು ಆಯನೂರು ವಿಷಾದಿಸಿದರು..
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..