

ಪುತ್ತೂರು ಗ್ರಾಮಾಂತರ: ಕುರಿಯ ಗ್ರಾಮದಲ್ಲಿ 8 ಎಕರೆ ಜಾಗದಲ್ಲಿ ಕಾರ್ಮಿಕರ ವಸತಿ ಶಾಲೆ ನಿರ್ಮಿಸಲಾಗುವುದು. ಇದಕ್ಕಾಗಿ ಸರ್ಕಾರ 75 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಈ ಪೈಕಿ 40 ಕೋಟಿ ರೂ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಶಾಸಕ ಅಶೋಕ್ಕುಮಾರ್ ರೈ ಹೇಳಿದರು.
ಕುರಿಯ ಗ್ರಾಮದ ಬಳ್ಳಮಜಲು ಎಂಬಲ್ಲಿ ಭಾನುವಾರ ಶಾಸಕರ ಗ್ರಾಮ ಭೇಟಿ ಕಾರ್ಯಕ್ರಮ, ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕುರಿಯ ವಲಯ ಕಾಂಗ್ರೆಸ್ ಉಸ್ತುವಾರಿ ಶಿವರಾಮ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಅಕ್ರಮ- ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಕೋಶಾಧಿಕಾರಿ ಶರೂನ್ ಸಿಕ್ವೇರಾ, ಪಕ್ಷದ ಮುಖಂಡ ಸುರೇಂದ್ರ ರೈ ನೇಸರ, ಗ್ರಾಪಂ ಸದಸ್ಯರಾದ ರಕ್ಷಿತಾ, ಯಾಕೂಬ್, ಬೂತ್ ಸಮಿತಿ ಅಧ್ಯಕ್ಷರಾದ ಮೋನಪ್ಪ, ದಿನೇಶ್ ಬೊಳಂತಿಮಾರು, ಗೋಪಾಲ ಮತ್ತಿತರರು ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ವಂದಿಸಿದರು.