ಮಲೆಕುಡಿಯ ನಿವಾಸಕ್ಕೆ ಶಾಸಕ ಭೇಟಿ

hbr
Published on

ಹೆಬ್ರಿ: ವರಂಗ ಗ್ರಾಪಂ ವ್ಯಾಪ್ತಿಯ ಮೊರಂಟೆಬೈಲು ಮಲೆಕುಡಿಯ ಕುಟುಂಬಗಳ ಮನೆಗಳಿಗೆ ಶಾಸಕ ವಿ.ಸುನೀಲ್ ಕುಮಾರ್ ಭೇಟಿ ನೀಡಿದರು.

ಕುದುರೆಮುಖ ವನ್ಯಜೀವಿ ವಿಭಾಗ ಪೆಟ್ರೋಲಿಂಗ್ ಪಾಥ್ ನಿರ್ಮಿಸಿ ಮೊರಂಟೆಬೈಲು ಮಲೆಕುಡಿಯ ಕುಟುಂಬಗಳಿಗೆ ರಸ್ತೆ ನಿರ್ಮಾಣ ಕುರಿತು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ನಿರ್ದೇಶಕ ಶಿವರಾಂಬಾಬು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲಿಸಿದ್ದರು. ಇಲ್ಲಿ ಸುಮಾರು 4 ಕಿ.ಮೀ. ಉದ್ದದ ಗಸ್ತು ರಸ್ತೆ ನಿರ್ಮಿಸಿದ್ದಾರೆ.

ಇಲ್ಲಿಗೆ ರಸ್ತೆ ನಿರ್ಮಾಣ ಮಾಡಲು ಗ್ರಾಮಸಭೆ, ತಾಲೂಕು ಮಟ್ಟದ ಅಹವಾಲು ಸಭೆಗಳಲ್ಲಿ ಅನೇಕ ಬಾರಿ ಮನವಿ ನೀಡಿದ್ದರೂ ಫಲಪ್ರದವಾಗಿರಲಿಲ್ಲ. ಇತ್ತೀಚೆಗೆ ನಕ್ಸಲ್ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡ ಬಳಿಕ ಗಸ್ತು ರಸ್ತೆ ನಿರ್ಮಿಸಲಾಗಿದೆ.

ಇಲ್ಲಿನ ಜನರು ಪ್ರಮುಖವಾಗಿ ರಸ್ತೆ ಹಾಗೂ ವಿದ್ಯುತ್ ಬೇಡಿಕೆ ಇಟ್ಟಿದ್ದು, ಶಾಸಕ ಸುನೀಲ್ ಕುಮಾರ್ ಕುಟುಂಬಗಳಿಗೆ ವಿಶೇಷ ಮುತುವರ್ಜಿ ವಹಿಸಿ ಸೋಲಾರ್ ಹಾಕಿ ಕೊಡುವ ವ್ಯವಸ್ಥೆ ಶೀಘ್ರದಲ್ಲಿ ನೆರವೇರಿಸುವುದಾಗಿ ತಿಳಿಸಿದ್ದಾರೆ.

ವಾಸು ಮಲೆಕುಡಿಯ ಕುಟುಂಬಿಕರು, ಸ್ಥಳೀಯರಾದ ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಶ್ರೀಧರಗೌಡ, ಸುದೀಪ್ ಅಜಿಲ, ಕುದುರೆ ಮುಖ ವನ್ಯಜೀವಿ ವಿಭಾಗ ಅಭಿಲಾಶ್, ಯಮನೂರು ಉಪಸ್ಥಿತರಿದ್ದರು.

ನಾನು ಬರುವುದು ಖಾತ್ರಿ ಮಾಡಿಕೊಂಡು ಉತ್ತಮ ಆತಿಥ್ಯ ನೀಡಿದ್ದಾರೆ. ಇಲ್ಲಿಯ ಜನ ರಸ್ತೆ ಹಾಗೂ ವಿದ್ಯುತ್ ಬಗ್ಗೆ ಆಗಾಗ ನನಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆಯವರ ತೊಂದರೆಯಿಂದ ಯಾವುದೂ ಸಾಧ್ಯವಾಗಿರಲಿಲ್ಲ. ರಸ್ತೆ ಕೆಲಸ ನಡೆಯುತ್ತಿದೆ, ವಿದ್ಯುತ್‌ಗೆ ಬೇಕಾದ ವ್ಯವಸ್ಥೆ ಶೀಘ್ರದಲ್ಲಿ ಮಾಡಿಕೊಡಲಾಗುವುದು. -ಸುನೀಲ್ ಕುಮಾರ್, ಶಾಸಕ https://www.vijayavani.net/achievement-through-art-and-literary-activities https://www.vijayavani.net/from-knowledge-to-science-lamp-unveiled

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net