ಕೂಡಲಸಂಗಮ ಸರ್ಕಾರಿ ಶಾಲೆ ನೂತನ ಕಟ್ಟಡ ನಿರ್ಮಿಸಲು ಕ್ರಮ

MLA, Vijayananda Kashappanavara, Kudalasangama, Government School,
ಕೂಡಲಸಂಗಮ ಗ್ರಾಮದ ಅರ್ಚಕ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಕಟ್ಟಡ ಪರಿಶೀಲಿಸಿದರು. ಹಾಲಯ್ಯ ಖಾತೆದಾರ, ಶರಣಯ್ಯ ಸ್ಥಾವರಮಠ, ಬಸವರಾಜ ತಂಡಿಗೇರಿ ಇತರರಿದ್ದರು.
Published on

ಕೂಡಲಸಂಗಮ: ಗ್ರಾಮದ ಅರ್ಚಕ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಕಟ್ಟಡ ಪರಿಶೀಲಿಸಿದರು.

ಎಸ್‌ಡಿಎಂಸಿ ಪದಾಧಿಕಾರಿಗಳು, ಗ್ರಾಮಸ್ಥರು ಶಾಲೆಯ ಎಲ್ಲ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವುದರ ಕುರಿತು ಶಾಸಕರಿಗೆ ಮನವರಿಕೆ ಮಾಡಿದರು. ಮಕ್ಕಳು ಭಯದಲ್ಲೇ ದಿನ ಕಳೆಯುವಂತಾಗಿದ್ದು, ಮಳೆ ಬಂದರೆ ಸಂಪೂರ್ಣ ಸೋರುತ್ತದೆ. ಕೂಡಲೇ ನೂತನ ಕಟ್ಟಡ ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸರ್ಕಾರದ ಗಮನಕ್ಕೆ ತಂದು ಕೂಡಲೇ ಕಟ್ಟಡ ನಿರ್ಮಿಸುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು. ಶಾಸಕರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ಕೆ.ಆರ್.ದೇಶಪಾಂಡೆ, ನಿವೃತ್ತ ಮುಖ್ಯಶಿಕ್ಷಕ ಎಸ್.ಎಂ.ಪುರಾಣಿಕ, ಗ್ರಾಮ ಪಂಚಾಯಿತಿ ಸದಸ್ಯ ಪ್ರಭು ಹಿರೇಮಠ, ಮುಖಂಡರಾದ ಹಾಲಯ್ಯ ಖಾತೆದಾರ, ಶರಣಯ್ಯ ಸ್ಥಾವರಮಠ, ಬಸವರಾಜ ತಂಡಿಗೇರಿ, ಶೇಖರಯ್ಯ ಸ್ಥಾವರಮಠ, ಸಂಗಯ್ಯ ಗುರುನಂಜನಮಠ, ಶಿಕ್ಷಕ ಎಸ್.ಡಿ. ವಕ್ರ, ಜಿ.ಎಸ್.ಗುಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net