25ನೇ ವಯಸ್ಸಿಗೆ MLA ಟಿಕೆಟ್: ಸುಮಧುರ ಕಂಠದಿಂದಲೇ ಸದ್ದು ಮಾಡಿದ ಮೈಥಿಲಿ ಠಾಕೂರ್​ನ Net Worth ಎಷ್ಟು ಗೊತ್ತೆ!​

Bbau (39)
Published on

ಪಟ್ನಾ: ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಅ.15ಕ್ಕೆ ಬಿಜೆಪಿ ಬಿಡುಗಡೆ ಮಾಡಿದ 2ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಖ್ಯಾತ ಜಾನಪದ ಮತ್ತು ಭಕ್ತಿಗೀತೆ ಗಾಯಕಿ ಮೈಥಿಲಿ ಠಾಕೂರ್​ಗೆ (Maithili Thakur) ಅಲಿನಗರ್​​ದಿಂದ ಸ್ಪರ್ಧಿಸಲು ಅವಕಾಶ ನೀಡಿದೆ.

ಹೌದು, ಜನಪ್ರಿಯ ಜಾನಪದ ಗಾಯಕಿ ಮೈಥಿಲಿ ಠಾಕೂರ್ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಬಿಜೆಪಿ, ದರ್ಭಂಗಾ ಜಿಲ್ಲೆಯ ಅಲಿನಗರ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಿದೆ. ಚುನಾವಣಾ ಕಣಕ್ಕೆ ಅವರ ಪ್ರವೇಶವು ಕ್ಷೇತ್ರಕ್ಕೆ ಸಾಕಷ್ಟು ಗಮನ ಸೆಳೆದಿದೆ.

243 ಸ್ಥಾನಗಳ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಇತ್ತೀಚಿಗೆ ಪಾಟ್ನಾದಲ್ಲಿ ಗಾಯಕಿ ಮೈಥಿಲಿ ಬಿಜೆಪಿ ಸೇರ್ಪಡೆಯಾಗಿದ್ದರು.

25 ವಯಸ್ಸಿಗೆ ಬಿಜೆಪಿ ಟಿಕೆಟ್​

ಮೈಥಿಲಿ ಠಾಕೂರ್ 25 ವರ್ಷ ವಯಸ್ಸಿನವರಾಗಿದ್ದು, ಹೊಸ ಪೀಳಿಗೆಗೆ ಜಾನಪದ ಸಂಗೀತವನ್ನು ತರುವಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ಭಜನೆ ಮತ್ತು ಜಾನಪದ ಸಂಗೀತ ಕ್ಷೇತ್ರಗಳಲ್ಲಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಅಭಿಮಾನಿಗಳನ್ನು ಹೊಂದಿದ್ದಾರೆ, ಇದು ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಅವರನ್ನು ಗುರುತಿಸುವಂತೆ ಮಾಡಿದೆ. ಇದೀಗ ಚಿಕ್ಕ ವಯಸ್ಸಿಗೆ ಬಿಜೆಪಿ ಟಿಕೆಟ್ ನೀಡಿದೆ. ಅವರ ಆಸ್ತಿ ಮೌಲ್ಯ ಏನೆಂಬುದು ತಿಳಿಯೋಣ..

1.5 ಕೋಟಿ ರೂ. ಆಸ್ತಿ ಮೌಲ್ಯ(Net Worth )

ಚುನಾವಣಾ ಅಫಿಡವಿಟ್ ಪ್ರಕಾರ, ದೆಹಲಿ ವಿಶ್ವವಿದ್ಯಾಲಯದ ಭಾರ್ತಿ ಕಾಲೇಜಿನಲ್ಲಿ ಪದವಿ ಪಡೆದಿರುವ ಮೈಥಿಲಿ ಠಾಕೂರ್ ಅವರು 1.80 ಲಕ್ಷ ನಗದು, 2 ಕೋಟಿಗೂ ಹೆಚ್ಚು ಮೌಲ್ಯದ ವಾಹನಗಳು ಮತ್ತು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ. ಖರೀದಿಸಿದ ಭೂಮಿ ಸೇರಿದಂತೆ ಅವರ ಸ್ಥಿರಾಸ್ತಿಗಳು ಸುಮಾರು 1.5 ಕೋಟಿ ಮೌಲ್ಯದ್ದಾಗಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net