More

  ರಬಕವಿಯಲ್ಲಿ ಶಾಸಕ ಸಿದ್ದು ಸವದಿ ಪ್ರಚಾರ

  ರಬಕವಿ/ಬನಹಟ್ಟಿ: ರಬಕವಿಯಲ್ಲಿ ಶಾಸಕ ಸಿದ್ದು ಸವದಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಗುರುವಾರ ಬೆಳಗ್ಗೆ ಪ್ರಚಾರ ನಡೆಸಿದರು.

  ಐದು ವರ್ಷ ಅಧಿಕಾರಾವಧಿಯಲ್ಲಿ ಮತಕ್ಷೇತ್ರದ ಪ್ರಮುಖ ನಗರವಾಗಿರುವ ರಬಕವಿಯಲ್ಲಿ ರಸ್ತೆ, ಚರಂಡಿ, ಶಾಲೆ ಕಾಲೇಜುಗಳ ಅಭಿವೃದ್ಧಿ, ದೇವಸ್ಥಾನ, ಸಮುದಾಯ ಭವನಗಳ ಅಭಿವೃದ್ಧಿ ಮತ್ತು ಜೀರ್ಣೋದ್ಧಾರ, ನೀರಿನ ಸೌಲಭ್ಯ, ಸೇತುವೆ ಕಾಮಗಾರಿಗಳನ್ನು ಪ್ರಾಮಾಣಿಕವಾಗಿ ಕೈಗೊಳ್ಳಲಾಗಿದೆ. ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ 48.75 ಲಕ್ಷ ಕೋಟಿ ರೂ. ವೆಚ್ಚದಲ್ಲಿ 2000 ಮನೆಗಳನ್ನು ಮಂಜೂರಿಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ರಬಕವಿ ನಗರದ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಸವದಿ ತಿಳಿಸಿದರು.

  ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಮಹಾದೇವ ಕೋಟ್ಯಾಳ, ಜಯಪ್ರಕಾಶ ಸೊಲ್ಲಾಪುರ, ವಜ್ರಕಾಂತ ಕಮತಗಿ, ಪ್ರಭು ಪೂಜಾರಿ, ಸವಿತಾ ಹೊಸೂರ, ಮಾರುತಿ ಗಾಡಿವಡ್ಡರ, ಮಹಾದೇವ ಆಲಕನೂರ, ಯುನಿಸ್ ಚೌಗಲಾ, ಬಸವರಾಜ ತೆಗ್ಗಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts