ಬಿಜೆಪಿ ಕಚೇರಿಯಾಗಿರುವ ರಾಜಭವನ: ಶಾಸಕ ರವಿಕುಮಾರ್ ಗಣಿಗ ಟೀಕೆ

Mla Ravikumar Gainga

ಮಂಡ್ಯ: ರಾಜಭವನವನ್ನು ಬಿಜೆಪಿ ಕಚೇರಿ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಪತ್ರ ಬರೆಯುತ್ತಿಲ್ಲ. ಬದಲಿಗೆ ಬಿಜೆಪಿ ಮಾಸ್ಟರ್ ಮೈಂಡ್‌ಗಳ ಪತ್ರಕ್ಕೆ ಸಹಿ ಹಾಕುತ್ತಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ಗಂಭೀರ ಆರೋಪ ಮಾಡಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಟಕ ವಿರುದ್ಧ ನಮ್ಮ ಜನಾಂದೋಲನ. ಆ.6ರಂದು ಮಂಡ್ಯದಲ್ಲಿ ಜನಾಂದೋಲನ ಸಮಾವೇಶ ಮಾಡುತ್ತೇವೆ. ಈ ಸಮಾವೇಶಕ್ಕೆ ಜಿಲ್ಲೆಯ ಶಾಸಕರು, ಡಿಸಿಎಂ ಹಾಗೂ ಸಿಎಂ ಕೂಡ ಆಗಮಿಸಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ನವರ ನಾಟಕಕ್ಕೆ ಫುಲ್‌ಸ್ಟಾಪ್ ಹಾಕಬೇಕಿದೆ. ರಾಜ್ಯದಲ್ಲಿ ಕೊಳ್ಳೆ ಹೊಡೆದ ಬಿಜೆಪಿ ಜೆಡಿಎಸ್‌ನವರನ್ನು ಜನ ಮನೆಯಲ್ಲಿ ಕೂರಿಸಿದ್ದಾರೆ. 136 ಸ್ಥಾನ ಕೊಟ್ಟು ಆಡಳಿತ ಮಾಡಲು ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಸಿಎಂ ಪತ್ನಿ ಅವರ ಜಾಗದಲ್ಲಿ ವಿನಾಕಾರಣ ಮುಡಾದದವರೇ ಅತಿಕ್ರಮ ಮಾಡಿ, ಈಗ ಸಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಸಿಎಂ ಪತ್ನಿ ಮುಡಾದವರ ಮೇಲೆ 420 ಕೇಸ್ ಹಾಕಬೇಕು. ಈ ಹಗರಣವನ್ನು ಬಿಜೆಪಿಯವರೇ ಮಾಡಿ ಸಿಎಂ ಸಿಕ್ಕಿ ಹಾಕಿಸಲು ನೋಡುತ್ತಿದ್ದಾರೆ. ಹಳೇ ಸಿನಿಮಾದ ತರಹ ಹೀರೋ ಜತೆಗೆ ಒಬ್ಬರನ್ನು ಬಿಟ್ಟು ಹಿಡಿದಾಕೋ ರೀತಿ ಇದೆ. ಸಿಎಂ ಸಿದ್ದರಾಮಯ್ಯ ಶುದ್ಧ ಹಸ್ತದ ವ್ಯಕ್ತಿ. ಮುಖ್ಯಮಂತ್ರಿಯಾಗಿ 5 ವರ್ಷ ಅಧಿಕಾರ ಅನುಭವಿಸಿದ ನಂತರದ ಚುನಾವಣೆ ಎದುರಿಸಬೇಕಾದಾಗ ರಾಜಕಾರಣಿಯೊಬ್ಬರ ಬಳಿ ಸಾಲ ಮಾಡಿದ್ದರು ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಹುನ್ನಾರ ಮಾಡಿ ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದುಕೊಂಡಿದ್ದಾರೆ. ಅದಕ್ಕಾಗಿ ಈ ಪಾದಯಾತ್ರೆ ನಾಟಕ ಮಾಡಿಕೊಂಡು ಬರುತ್ತಿದ್ದಾರೆ. ಮೊನ್ನೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪಾದಯಾತ್ರೆಗೆ ನಾನು ಬರಲ್ಲ ಎಂದಿದ್ದರು. ಈಗ ಅವರನ್ನು ಕರೆದುಕೊಂಡು ಹೊರಟಿದ್ದಾರೆ. ಇವರಿಗೆ ಯಾವುದೇ ನಿಲುವಿಲ್ಲ, ಸಿದ್ದರಾಮಯ್ಯರನ್ನು ಇಳಿಸಿ ಇವರು ಸಿಎಂ ಆಗಿಬಿಡಬೇಕು ಎನ್ನುವ ಹಪಾಹಪಿ ಅಷ್ಟೇ. ಮನುಷ್ಯತ್ವ ಇರುವವರು ಪಾದಯಾತ್ರೆ ಮಾಡಲ್ಲ. ಮುಡಾ ಹಗರಣದ ತನಿಖೆ ಆಗಲಿ, ಯಾರು ತಪ್ಪು ಮಾಡಿದ್ದಾರೋ ಅವರು ಜೈಲೂಟ ಮಾಡುವುದು ಗ್ಯಾರಂಟಿ ಎಂದರು.
ಮಂಡ್ಯ ಮುಡಾ ಅಧ್ಯಕ್ಷ ನಹೀಂ ಇದ್ದರು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!

ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…