ಬೆಂಗಳೂರು : ವಿಜಯವಾಣಿ ನಡೆಸಿದ್ದ ರಿಯಾಲಿಟಿ ಚೆಕ್‌ನಲ್ಲಿ ಡಾ.ರಾಜಕುಮಾರ್ ರಸ್ತೆಲ್ಲಿ ಕಳೆದ 3 ತಿಂಗಳಿನಿಂದ ಉಂಟಾಗುತ್ತಿರುವ ಕಾಮಗಾರಿ ವಿಳಂಬದಿಂದ ಆಗಿರುವ ದುರವಸ್ಥೆಗಳನ್ನು ವರದಿ ಮಾಡಿತ್ತು. ಕಾಮಗಾರಿ ವಿಳಂಬದ ಹಿಂದೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ.
ವಿಜಯವಾಣಿ ವರದಿಯಿಂದ ಎಚ್ಚೆತ್ತಿರುವ ಸ್ಥಳೀಯ ಶಾಸಕ ಸುರೇಶ್ ಕುಮಾರ್, ಬೆಂಗಳೂರಿನ ಹೃದಯಭಾಗವಾಗಿರುವ ರಾಜಕುಮಾರ್ ರಸ್ತೆಯ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವ ಸಂಬಂಧ ಎಲ್ಲ ಇಲಾಖೆಗಳ ನಡುವೆ ಸಮನ್ವಯಕ್ಕಾಗಿ ಸಮಿತಿ ರಚಿಸಿದ್ದು, ಮೂರು ಬಾರಿ ಸಭೆ ಕೂಡಾ ನಡೆಸಲಾಗಿದೆ. ಇನ್ನು 15 ದಿನಗಳೊಳಗೆ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳ ಸರ್ಕಾರಿ ಬಸ್ಸುಗಳು ಬೆಂಗಳೂರಿಗೆ ಬರುವುದು ಇದೇ ಮಾರ್ಗದಲ್ಲಿ. ರಾಜಕುಮಾರ್ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ವೆಸ್ಟ್ ಆಫ್ ಕಾರ್ಡ್ ರಸ್ತೆ ಅಥವಾ ಮಹಾಕವಿ ಕುವೆಂಪು ರಸ್ತೆ ಮೂಲಕ ಡೈವರ್ಟ್ ಮಾಡಿ ಕೆಲ ದಿನಗಳ ಮಟ್ಟಿಗೆ ಸಂಚಾರ ನಿರ್ಬಂಧಿಸುವಂತೆ ಮಾಡಿದ ಮನವಿಗೆ ಸಂಚಾರಿ ಪೊಲೀಸರು ಒಪ್ಪಿಗೆ ನೀಡಿಲ್ಲ. ಇದರಿಂದ ರಾತ್ರಿ 10 ಗಂಟೆಯ ನಂತರ ಮಾತ್ರ ಕೆಲಸ ನಡೆಯುತ್ತಿದೆ.
ಬಿಬಿಎಂಪಿ ಮೂರು ವಿಭಾಗಗಳು, ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ ಮತ್ತು ಸಂಚಾರಿ ಪೊಲೀಸರು ಹೀಗೆ 6 ಇಲಾಖೆಗಳ ನಡುವೆ ಸರಿಯಾದ ಸಮನ್ವಯ ಇಲ್ಲದ ಕಾರಣಕ್ಕೆ ಕಾಮಗಾರಿ ವಿಳಂಬವಾಗುತ್ತಿದೆ.
ಒಟ್ಟೊಟ್ಟಿಗೆ ಮೂರು ಕಾಮಗಾರಿಗಳು
ವಾಸ್ತವದಲ್ಲಿ ಬಿಬಿಎಂಪಿ ಈ ರಸ್ತೆಯನ್ನು ವೈಟ್‌ಟ್ಯಾಪಿಂಗ್ ಮಾಡಲು ಮುಂದಾಗಿದೆ. ವೈಟ್ ಟ್ಯಾಪಿಂಗ್ ಮಾಡಿದ ನಂತರ ದಶಕಗಳ ಕಾಲ ಬೇರೆ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕಾಮಗಾರಿಗೂ ಮುನ್ನ ಬಿಡಬ್ಲೂೃಎಸ್‌ಎಸ್‌ಬಿ ಕಾಮಗಾರಿಗಳಿದ್ದರೆ ಮಾಡುವಂತೆ ಸೂಚಿಸಿತ್ತು. ಅದರಂತೆ ಬಿಡಬ್ಲ್ಯೂಎಸ್ಎಸ್ಬಿ ಸ್ಯಾನಿಟರಿ ಕನೆಕ್ಷನ್ ಹೊಸ ಪೈಪ್‌ಗಳನ್ನು ಅಳವಡಿಸಲು ಮುಂದಾಗಿದೆ. ಅದಕ್ಕಾಗಿ ಗುಂಡಿಗಳನ್ನು ತೆಗೆಯುತ್ತಿದ್ದಾಗ ಬೆಸ್ಕಾಂನ ಮುಖ್ಯ ಕೇಬಲ್ ಒಂದು ಈ ಮಾರ್ಗದಲ್ಲಿ ಹಾದು ಹೋಗಿರುವುದು ಕಾಮಗಾರಿಗೆ ಅಡಚಣೆಯುಂಟು ಮಾಡಿದೆ. ಅದನ್ನು ಪೂರ್ಣಗೊಳಿಸದೆ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎನ್ನಲಾಗಿದ್ದು, ಕೇಬಲ್ ಮರು ಅಳವಡಿಸಲು ಬಿಡಬ್ಲ್ಯೂಎಸ್ಎಸ್ಬಿಯೇ ಖರ್ಚು ನೀಡಬೇಕು ಎಂದು ಬೆಸ್ಕಾಂ ಹಟ ಹಿಡಿದು ಕೂತಿದೆ. ನಂತರ ಸ್ಥಳೀಯ ಶಾಸಕ ಸುರೇಶ ಕುಮಾರ್ ಅವರ ಮಧ್ಯಸ್ಥಿಕೆಯಲ್ಲಿ ಎರಡೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತಕತೆ ನಡೆಸಿ ಸಮಸ್ಯೆ ಬಗೆಹರಿದಿದೆ. ಎರಡು–ಮೂರು ದಿನದಲ್ಲಿ ಬೆಸ್ಕಾಂ ಕೇಬಲ್ ಅಳವಡಿಕೆ ಪೂರ್ಣಗೊಳಿಸುವುದಾಗಿ ಶಾಸಕರು ಹೇಳಿದ್ದಾರೆ. ಬೆಸ್ಕಾಂ ಕೇಬಲ್, ಬಿಡಬ್ಲ್ಯೂಎಸ್ಎಸ್ಬಿ ಪೈಪ್, ಬಿಬಿಎಂಪಿ ವೈಟ್ ಟ್ಯಾಪಿಂಗ್ ಹೀಗೆ ಮೂರು ಕಾಮಗಾರಿಗಳು ನಡೆಯುತ್ತಿವೆ.
ನಗರದ ಪ್ರಮುಖ ಭಾಗವಾಗಿರುವ ರಾಜಕುಮಾರ್ ರಸ್ತೆ ರಾಜಾಜಿನಗರ ಕ್ಷೇತ್ರಕ್ಕೆ ಒಳಪಟ್ಟಿದ್ದು, ಮೂರು ಇಲಾಖೆಯ ಕಾಮಗಾರಿ ಒಟ್ಟಿಗೆ ನಡೆಯುತ್ತಿರುವುದರಿಂದ ಸ್ವಲ್ಪ ತಡವಾಗಿದೆ. ಇಲ್ಲಿನ ಕಾಮಗಾರಿ ವಿಳಂಬದಿಂದ ಕೆಲ ಅನಾಹುತಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಲು ರಾತ್ರಿ ವೇಳೆ ಎರಡು ಬ್ಯಾಚ್ ಮೂಲಕ ಕಾಮಗಾರಿ ಬೇಗ ಮುಗಿಸಲು ಸೂಚನೆ ನೀಡಿದ್ದೇನೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಐಸಿಯುನಲ್ಲಿರುವ ಮಂಜುನಾಥ್ ಜನರಲ್ ವಾರ್ಡಿಗೆ ಶ್‌ಟಿ ಆದ ಕೂಡಲೇ ಹೋಗಿ ವಿಚಾರಿಸುತ್ತೇನೆ. ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತೇನೆ.
–ಎಸ್.ಸುರೇಶಕುಮಾರ್, ರಾಜಾಜಿನಗರ ಶಾಸಕ
ಮಕ್ಕಳು ಚನ್ನಾಗಿ ಓದಿ ಸಾಧನೆ ಮಾಡಿದರೆ ಎಲ್ಲರಿಗೂ ಹೆಮ್ಮೆ; ಶಾಸಕ ಎಸ್ ಮುನಿರಾಜು ಅಭಿಮತ