

ಗಂಗೊಳ್ಳಿ: ಕುಂದಾಪುರ ವಿಧಾನಸಭಾ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಶಾಸಕ ಕಿರಣ್ ಕೊಡ್ಗಿ ಉಡುಪಿ ಜಿಲ್ಲಾಧಿಕಾರಿಯನ್ನು ಇತ್ತೀಚೆಗೆ ಭೇಟಿಯಾಗಿ ಚರ್ಚಿಸಿದರು.
ಕೊರಗ ಸಮುದಾಯದವರಿಗೆ ಭೂಮಿ ಮಂಜೂರು ಮಾಡುವಂತೆ, ಬ್ರಹ್ಮಾವರ ತಾಲೂಕು ಕೋಟ ಹೋಬಳಿ ಕೋಡಿ ಗ್ರಾಮದಲ್ಲಿ ವಾಸ್ತವ್ಯ ಹೊಂದಿರುವ ಕುಟುಂಬಗಳಿಗೆ ಜಾಗ ಸಕ್ರಮಗೊಳಿಸಲು ಪರಂಬೊಕು ಶೀರ್ಷಿಕೆಯಿಂದ ವಿರಹಿತಗೂಳಿಸುವ ಕುರಿತು, ಕುಂದಾಪುರ ಕಸಬಾ ವ್ಯಾಪ್ತಿಯಲ್ಲಿ ಹಲವು ವರ್ಷಗಳಲ್ಲಿ ವಾಸ್ತವ್ಯವಿರುವ ಕುಟುಂಬಗಳಿಗೆ 94ಸಿ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದರು. ಕೃತಕ ನೆರೆಯಿಂದ ಕೃಷಿ ಮತ್ತು ಇತರೆ ಸ್ಥಳಗಳಿಗೆ ಹಾನಿ ಉಂಟಾಗಿದ್ದು, ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.