ಮಳೆ ಹಾನಿ ಪ್ರದೇಶಕ್ಕೆ ಶಾಸಕ ಕಾಮತ್ ಭೇಟಿ

mng-9july-mla visit
Published on


ಮಂಗಳೂರು : ನಗರದಲ್ಲಿ ಸುರಿದ ಭಾರಿ ಮಳೆಯಿಂದ ಕುಲಶೇಖರದ ಸಿಲ್ವರ್ ಗೇಟ್ ವೀರನಾರಾಯಣ ಕಟ್ಟೆ ಬಳಿಯ ಮನೋಹರ ಅಂಚನ್ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇತರ ಮನೆಗಳಿಗೆ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಸ್ಥಳೀಯರಾದ ಅಜಯ್ ಕುಲಶೇಖರ, ಸುಶಾಂತ್ ಹರಿಣಿ, ಪ್ರೇಮ್, ಚರಣ್, ಕಿರಣ್ ರೈ, ಅಶ್ವಿತ್ ಕೊಟ್ಟಾರಿ, ನವೀನ್ ಶೆಣೈ, ಪ್ರಶಾಂತ್, ರಾಮಚಂದ್ರ, ರತೀಶ್, ದಿನೇಶ್, ಶೇಖರ್, ವಿಜಯ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net