ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲು- ಶಾಸಕ ವೇದವ್ಯಾಸ ಕಾಮತ್

allwyn_130820_kamath
Published on


ಮಂಗಳೂರು : ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಆರೋಪದಡಿ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರ ಮೇಲೆ ಕಾಂಗ್ರೆಸ್ ನಾಯಕರ ಆಣತಿಯಂತೆ ರಾಜಕೀಯ ಪ್ರೇರಿತ ಪ್ರಕರಣ ದಾಖಲಾಗಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ವಿದೇಶದಲ್ಲಿದ್ದಾಗ ಭಾರತದ ವಿರುದ್ದ, ಸ್ವದೇಶದಲ್ಲಿದ್ದಾಗ ಹಿಂದೂಗಳ ವಿರುದ್ಧ ಹೇಳಿಕೆ ನೀಡುವ ರಾಹುಲ್ ಗಾಂಧಿಗೆ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸದೇ ಹಾರ ಹಾಕಿ ಗೌರವಿಸಬೇಕಿತ್ತಾ? ಬಿಜೆಪಿ ರಾಷ್ಟ್ರ ಮೊದಲು ಎನ್ನುವ ಸಿದ್ಧಾಂತದ ಹಿನ್ನಲೆ ಹೊಂದಿರುವ ಪಕ್ಷ. ಹಿಂದುತ್ವ ಎನ್ನುವುದು ಈ ರಾಷ್ಟ್ರದ ಮೂಲ ತತ್ವ. ಅದಕ್ಕಾಗಿ ಒಂದಲ್ಲ, ನೂರು ಪ್ರಕರಣಗಳನ್ನು ಎದುರಿಸಲು ಸಿದ್ಧವೆಂದು ಅವರು ತಿಳಿಸಿದ್ದಾರೆ.
ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಿಸುವ ಮೊದಲು ಹಿಂದೂ ಪದದ ಅರ್ಥವೇ ಅಶ್ಲೀಲ, ರಾಮಾಯಣವೇ ಕಟ್ಟು ಕಥೆ ಮುಂತಾದ ಹೇಳಿಕೆ ನೀಡಿರುವ ಕಾಂಗ್ರೆಸ್‌ನ ಮಹಾನಾಯಕರ ಮೇಲೆ ಕೇಸ್ ದಾಖಲಿಸುವ ಧೈರ್ಯ ತೋರಲಿ . ಶಾಸಕ ಭರತ್ ಶೆಟ್ಟಿ ಅವರ ಮೇಲೆ ದಾಖಲಾಗಿರುವ ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕೆಂದು ಶಾಸಕ ಕಾಮತ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net