ಕಡಲ್ಕೊರೆತ ಪ್ರದೇಶಕ್ಕೆ ಶಾಸಕ ಗುರ್ಮೆ ಭೇಟಿ

gurme-1
ಕಡಲ್ಕೊರೆತ ಉಂಟಾಗಿರುವ ಪಡುಬಿದ್ರಿ ನಡಿಪಟ್ಣ ಪ್ರದೇಶಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿದರು
Published on

ಪಡುಬಿದ್ರಿ: ಕಡಲ್ಕೊರೆತ ಉಂಟಾಗಿರುವ ಪಡುಬಿದ್ರಿ ನಡಿಪಟ್ಣ ಪ್ರದೇಶಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಲಾಖಾಧಿಕಾರಿಗಳೊಂದಿಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಗಾಲದಲ್ಲಿ ಕಡಲ್ಕೊರೆತ ಸಮಸ್ಯೆ ಅಧಿಕವಾಗಲಿರುವುದರಿಂದ ಅದಕ್ಕೆ ಬೇಕಾದ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಪ್ರತಿಭಾ ಆರ್., ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಹಾಯಕ ಅಭಿಯಂತರ ಜಯರಾಜ್, ಪಡುಬಿದ್ರಿ ಗ್ರಾಪಂ ಸದಸ್ಯೆ ವಿದ್ಯಾಶ್ರೀ, ಜಿಪಂ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net