ಪ್ರಧಾನಿಯಿಂದ ಯೋಗ ವಿಶ್ವ ಮನ್ನಣೆ ಪಡೆದಿದೆ

Hrr21Yoga1
filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: SFHDR; cct_value: 0; AI_Scene: (200, -1); aec_lux: 132.73067; hist255: 0.0; hist252~255: 0.0; hist0~15: 0.0;
Published on

ಹರಿಹರ: ಭಾರತದ ಋಷಿಮುನಿಗಳ ಆವಿಷ್ಕಾರವಾದ ಯೋಗವನ್ನು ವಿಶ್ವವ್ಯಾಪಿ ಪಸರಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ತಾಲೂಕು ಆಡಳಿತದಿಂದ ನಗರದ ಶ್ರೀ ರಾಘವೇಂದ್ರಸ್ವಾಮಿ ಮಠ ಸಮೀಪದ ತುಂಗಭದ್ರಾ ಆರತಿ ಮಂಟಪದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಪಾಶ್ಚಾತ್ಯ ಪ್ರಭಾವದಿಂದ ಯೋಗದ ಮಹತ್ವ ಕಡಿಮೆಯಾಗತೊಡಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ 11 ವರ್ಷಗಳ ಹಿಂದೆ ವಿಶ್ವಕ್ಕೆ ಯೋಗವನ್ನು ಪರಿಚಯಿಸಿ, ಭಾರತೀಯರು ಹೆಮ್ಮೆ ಪಡುವಂತೆ ಮಾಡಿದರು ಎಂದರು.

ಸ್ವಾಸ್ಥ್ಯ ಮನಸ್ಸು ಹಾಗೂ ಸದೃಢ ದೇಹಕ್ಕಾಗಿ ಯೋಗಾಭ್ಯಾಸ ಅನಿವಾರ್ಯವಾಗಿದೆ. ಜಗತ್ತಿನ ಹಲವಾರು ದೇಶಗಳ ಕೋಟ್ಯಂತರ ಮಂದಿ ಯೋಗವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನಾವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರೋಣ ಎಂದರು.

ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಲವಲವಿಕೆಯಿಂದ ಇರುತ್ತದೆ. ಕಾಯಿಲೆಗಳು ದೂರವಾಗಿ ದೈಹಿಕ ಆರೋಗ್ಯವೂ ಸುಧಾರಣೆಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆ ಕನಿಷ್ಠ ಅರ್ಧ ಗಂಟೆ ಯೋಗಕ್ಕೆ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವದೇವಿ ಅಕ್ಕ, ಅನಸೂಯ ಅಕ್ಕ, ಆರಕ್ಷಕ ವೃತ್ತ ನೀರಿಕ್ಷಕ ಸುರೇಶ್ ಸಗರಿ, ರಾಜಾಸಾಬ್ ಫಕೃದ್ದೀನ್, ಬಿಇಒ ಡಿ. ದುರುಗಪ್ಪ, ಯೋಗ ಶಿಕ್ಷಕ ಜಯರಾಮ್ ಧನ್ವಂತರಿ ಪತಂಜಲಿ ಯೋಗಕೇಂದ್ರದ ನಿರಂಜನ್, ವಿಶ್ವನಾಥ್, ಎಚ್. ಶಿವಾನಂದಪ್ಪ, ಕರಿಬಸಪ್ಪ ಕಂಚೀಕೇರಿ, ಮೀನಾಕ್ಷಿ ನಿರಂಜನ್, ಚಂದ್ರಕಾಂತ್ ತೇಲ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net