ಸಚಿವ ಡಾ.ಎಂ.ಬಿ.ಪಾಟೀಲರ ಜನ್ಮದಿನದ ಹಿನ್ನೆಲೆ ಸನ್ಮಾನ ಸಮಾರಂಭ

MLA, Ashoka Managuli, Minister Dr. MB Patila, Brahmadevanadu, Sindagi, Golageri,
ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಅಶೋಕ ಮನಗೂಳಿ, ಡಾ.ರವಿ ಗೋಲಾ, ಗೋಲ್ಲಾಳಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ ಇತರರಿದ್ದರು.
Published on

ಬ್ರಹ್ಮದೇವನಮಡು: ಅಧಿಕಾರ ಶಾಶ್ವತವಲ್ಲ, ನಾವು ಮಾಡುವ ಕೆಲಸಗಳು ಶಾಶ್ವತ. ಶ್ರೀಮಂತಿಕೆಯಿದ್ದಾಗ ದಾನ ಮಾಡಬೇಕು. ವಯಸ್ಸು ಇದ್ದಾಗ ದುಡಿಬೇಕು, ಅಧಿಕಾರ ಇದ್ದಾಗ ಜನಸೇವೆ ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಸಚಿವ ಡಾ.ಎಂ.ಬಿ.ಪಾಟೀಲ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ಕಾಂಗ್ರೆಸ್ ಮುಖಂಡ ಶಿವು ಹತ್ತಿ ಅಭಿಮಾನಿ ಬಳಗದಿಂದ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ಸೈನಿಕರು, ರೈತರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಎಂ.ಬಿ.ಪಾಟೀಲರು 35 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಹಿಂದೆ ಜಲ ಸಂಪನ್ಮೂಲ ಸಚಿವರಾಗಿ ನೀರಾವರಿ ಕ್ರಾಂತಿ ಮಾಡಿರುವ ಡಾ.ಎಂ.ಬಿ.ಪಾಟೀಲರು ಸದ್ಯ ಕೈಗಾರಿಕೆ ಸಚಿವರಾಗಿ ಕೈಗಾರಿಕೆ ಕ್ರಾಂತಿ ಮಾಡುತ್ತಿದ್ದಾರೆ ಎಂದರು.

ಆಲಮೇಲ ಪಪಂ ಅಧ್ಶಕ್ಷ ಸಾಧಿಕ್ ಸುಂಬಡ, ಜಿಪಿ ಪೋರವಾಲ್ ಕಲಾ ವಾಣಿಜ್ಯ ಮತ್ತು ವಿವಿ ಸಾಲಿಮಠ ವಿಜ್ಞಾನ ಪದವಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರವಿ ಗೋಲಾ, ಕಾಂಗ್ರೆಸ್ ಯುವ ಮುಖಂಡ ಗೋಲ್ಲಾಳಪ್ಪಗೌಡ ಪಾಟೀಲ (ನಾಗಾವಿ), ಕಾಂಗ್ರೆಸ್ ಮುಖಂಡ ಶಿವು ಹತ್ತಿ ಮಾತನಾಡಿದರು.

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಢವಳಾರದ ಒಡೆಯರ ಮುತ್ಯಾ, ಮುಖಂಡ ಎಂ.ಎನ್.ಸಾಲಿ, ಗುರಣ್ಣಗೌಡ ಬಿರಾದಾರ (ನಾಗಾವಿ), ಪ್ರಭುಗೌಡ ಬಿರಾದಾರ (ಹಿರೇ ಅಲ್ಲಾಪೂರ), ವಿಜುಗೌಡ ಬಿರಾದಾರ, ರವಿರಾಜ ದೇವರಮನಿ, ಬಸವರಾಜ ಮಾರಲಭಾವಿ, ಬಾಬುಗೌಡ ಬಿರಾದಾರ, ಆರ್.ಬಿ.ಬಿರಾದಾರ, ವಿಠ್ಠಲ ಸಿಂದಗಿ, ಶಿವಯೋಗೆಪ್ಪ ಹತ್ತರಕಿ, ಬಹುಜನ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಬ್ಯಾಕೋಡ, ದಲಿತ ಮುಖಂಡ ಶ್ರೀಶೈಲ ಜಾಲವಾದಿ, ಮಾಬುರಿ ಹಳಿಮನಿ, ಬಸನಗೌಡ ಉಳ್ಳೆಸೂರ ಇತರರಿದ್ದರು.
ಮಡಿವಾಳಪ್ಪ ನಾಯ್ಕೋಡಿ ಸ್ವಾಗತಿಸಿದರು. ಶಿಕ್ಷಕ ಮಹಾಂತೇಶ ಮಾತನಾಡಿದರು. ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯಾಧ್ಶಕ್ಷ ಶ್ರೀಶೈಲ ಜಾಲವಾದಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net