ಪುತ್ತೂರು: ಪುಡಾದಲ್ಲಿ ಸಹಿ ಫೋರ್ಜರಿ ವಿಚಾರ ತಿಳಿಯುತ್ತಿದ್ದಂತೆ ತಾಂತ್ರಿಕ ಅನುಮೋದನೆಯನ್ನು ತಕ್ಷಣ ರದ್ದುಗೊಳಿಸಿದ್ದಾರೆ. ಫೋರ್ಜರಿಯಾದರೆ ಸದಸ್ಯ ಕಾರ್ಯದರ್ಶಿಗೆ ಅವಶ್ಯಕತೆ ಇದ್ದರೆ ದೂರು ನೀಡುತ್ತಾರೆ. ನಾವು ದೂರು ನೀಡಿ ಎಂದು ಹೇಳಲಾಗುವುದಿಲ್ಲ ಎಂದು ಶಾಸಕ ಅಶೋಕ್ಕುಮಾರ್ ರೈ ಹೇಳಿದ್ದಾರೆ.
ಕಾನೂನು ಪ್ರಕಾರ ದೂರು ನೀಡಬೇಕಿತ್ತು, ಫೋರ್ಜರಿ ಹೇಗಾಯಿತು, ಯಾಕಾಯಿತು ಎಂದು ತನಿಖೆ ನಡೆಸಿ ಸರ್ಕಾರ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಫೋರ್ಜರಿಯಾಗಿದ್ದರೆ ಅವರು ಅಮಾನತು ಆಗುತ್ತಾರೆ. ದೂರು ನೀಡಿದರೆ ಫೋರ್ಜರಿ ಮಾಡಿದವರಿಗೆ ಸಮಸ್ಯೆಯಾಗುತ್ತದೆ. ಇಲ್ಲವಾದರೆ ಇಬ್ಬರಿಗೂ ಸಮಸ್ಯೆಯಾಗುತ್ತದೆ. ಅಮಾನತು ಮಾಡುವುದಕ್ಕೆ ಹೇಳುವುದಕ್ಕೆ ಕಾಂಗ್ರೆಸ್ ಮುಖಂಡರು ಯಾರು? ಅಧಿಕಾರಿ ಅವರಿಗೆ ಬೇಕಾದಕ್ಕೆ ಅವರು ನೀಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.