ಕಾಣೆಯಾದ ಬೆಕ್ಕು ಮನೆಯೊಳಗೇ ಇತ್ತು.. ಎಲ್ಲೆಂದು ತಿಳಿದವರು ಒಮ್ಮೆ ಹೌಹಾರಿದರೂ ಅಚ್ಚರಿ ಏನಲ್ಲ!

Feature
Published on

ನವದೆಹಲಿ: ಆ ಬೆಕ್ಕು ಈ ಬಾಲಕಿಯ ಮುದ್ದಿನ ಸಾಕುಪ್ರಾಣಿ. ಆದರೆ ಇದ್ದಕ್ಕಿದ್ದಂತೆ ಕಾಣೆಯಾದ ಆ ಬೆಕ್ಕನ್ನು ಆಕೆಯೇ ಪತ್ತೆ ಹಚ್ಚಿದ್ದಳು. ಮನೆಯೊಳಗೇ ಬೆಕ್ಕಿದ್ದರೂ ಕಾಣದಂತಾಗಿದ್ದನ್ನು ಆಕೆ ಕೊನೆಗೂ ಪತ್ತೆ ಹಚ್ಚಿದ್ದಳು. ಆದರೆ ಬೆಕ್ಕು ಎಲ್ಲಿತ್ತು ಎಂಬುದನ್ನು ಹೇಳಿದರೆ ಎಂಥವರೂ ಒಮ್ಮೆ ಹುಬ್ಬೇರಿಸಿಬಿಡಬಹುದು!

ಹೌದು.. ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿ ತಿನ್ನುವುದು ಆಹಾರ ಸರಪಣಿಯೇನೋ ನಿಜ. ಆದರೆ ಮುದ್ದಿನ ಸಾಕುಪ್ರಾಣಿಯನ್ನು ಬೇರೆ ಪ್ರಾಣಿ ತಿಂದುಹಾಕಿದರೆ ಸಾಕಿದವರಿಗೆ ಅದರಲ್ಲೂ ಮಕ್ಕಳಿಗೆ ತುಂಬಾ ಬೇಸರದ ಸಂಗತಿ. ಅಂಥದ್ದೇ ಒಂದು ಬೇಸರಕ್ಕೆ ಈ ಬಾಲೆ ಒಳಗಾಗಿದ್ದು, ಅವರ ಬೇಸರಕ್ಕೆ ಜನರು ದೊಡ್ಡ ಪ್ರಮಾಣದಲ್ಲೇ ಪ್ರತಿಕ್ರಿಯಿಸಿದ್ದಾರೆ.

ಥಾಯ್ಲೆಂಡ್​ನ ಬಾಲಕಿಯೊಬ್ಬಳು ತಾನು ಸಾಕಿದ್ದ ಬೆಕ್ಕು ಕಾಣೆಯಾಗಿದ್ದಕ್ಕೆ ತೀವ್ರ ಬೇಸರಗೊಂಡಿದ್ದಳು. ಆದರೆ ಆಕೆಯ ಮುದ್ದಿನ ಬೆಕ್ಕು ಮನೆಯೊಳಗೆ ಹೊಕ್ಕಿದ್ದ ಹೆಬ್ಬಾವಿನ ಬಾಯಲ್ಲಿ ಇದ್ದಿದ್ದನ್ನು ಸ್ವತಃ ಆಕೆಯೇ ಕಂಡುಹಿಡಿದಿದ್ದಳು. ಹೆಬ್ಬಾವಿನ ಹೊಟ್ಟೆಯ ಭಾಗ ಉಬ್ಬಿದ್ದನ್ನು ಕಂಡ ಆಕೆ ಅದು ಬೆಕ್ಕನ್ನು ತಿಂದಿರಬಹುದು ಎಂದು ಊಹೆ ಮಾಡಿದ್ದಳು.

ರಕ್ಷಣಾ ತಂಡದವರನ್ನು ಕರೆಸಿ ಬೆಕ್ಕು ಹೊರತೆಗೆಸಲಾಯಿತಾದರೂ ಅದು ಜೀವಂತ ಸಿಗಲಿಲ್ಲ. ಹೀಗೆ ಹಾವನ್ನು ಬೆಕ್ಕು ನುಂಗಿದ್ದು, ಆ ಬಗ್ಗೆ ಸಾಕಿದ್ದ ಆ ಬಾಲೆಯ ಬೇಸರವನ್ನು ಕುಟುಂಬಸ್ಥರು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದು, ಆ ಪೋಸ್ಟ್ ವೈರಲ್ ಆಗಿತ್ತು. ಆ ಬಾಲಕಿಗೆ ವ್ಯಕ್ತಿಯೊಬ್ಬರು ಬೆಕ್ಕೊಂದನ್ನು ಕೊಡಲು ಮುಂದಾಗಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net