ಇಸ್ರೇಲ್‌ನ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿ; ಇರಾನ್ ಭಾರೀ ಬೆಲೆ ತೆರಲಿದೆ ಎಂದು ನೆತನ್ಯಾಹು ವಾಗ್ದಾಳಿ| benjamin-netanyahu

nethanyahu
Published on

ಇನ್ನೂ ಈ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಕ್ರೋಶ ಹೊರಹಾಕಿದ್ದಾರೆ. ಇಸ್ರೇಲ್‌ನ ದಕ್ಷಿಣದಲ್ಲಿರುವ ಪ್ರಮುಖ ಆಸ್ಪತ್ರೆ ಸೇರಿದಂತೆ ಹಲವು ನಾಗರಿಕ ಪ್ರದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ನಂತರ, ಇರಾನ್ 'ಭಾರೀ ಬೆಲೆ ತೆರಲಿದೆ' ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

Israel vs Iran: ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಬೀರ್‌ಶೆಬಾದಲ್ಲಿರುವ ಸೊರೊಕಾ ಆಸ್ಪತ್ರೆಯ ಮೇಲೆ ಗುರುವಾರ (ಜೂ.19) ಬೆಳಗ್ಗೆ ರಾನ್ ಕ್ಷಿಪಣಿ ದಾಳಿ ನಡೆಸಿದೆ.

ಇಂದು ಬೆಳಗ್ಗೆ ಇರಾನ್‌ನ ಭಯೋತ್ಪಾದಕ ಸರ್ವಾಧಿಕಾರಿಗಳು ಬೀರ್ ಶೇವಾದ ಸೊರೊಕಾ ಆಸ್ಪತ್ರೆ ಮತ್ತು ದೇಶದ ಮಧ್ಯಭಾಗದಲ್ಲಿರುವ ನಾಗರಿಕರ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಟೆಹ್ರಾನ್‌ನಲ್ಲಿರುವ ದಬ್ಬಾಳಿಕೋರರು ಭಾರೀ ಬೆಲೆ ತೆರುವಂತೆ ಮಾಡುತ್ತೇವೆ ಎಂದು ನೆತನ್ಯಾಹು X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಪರಿಣಾಮ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಬೀರ್‌ಶೆಬಾದಲ್ಲಿರುವ ಸೊರೊಕಾ ಆಸ್ಪತ್ರೆ ಹಾನಿಯಾಗಿದೆ. ಈ ಆಸ್ಪತ್ರೆಯೂ ಇಸ್ರೇಲ್‌ನ ದಕ್ಷಿಣದಲ್ಲಿರುವ ಪ್ರಮುಖ ಆಸ್ಪತ್ರೆಯಾಗಿದೆ.

ಈ ದಾಳಿಯಲ್ಲಿ ಜನರು ಗಾಯಗೊಂಡಿದ್ದಾರೆ. ಆಸ್ಪತ್ರೆಯು 1,000 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದೆ ಮತ್ತು ಇದು ಇಸ್ರೇಲ್‌ನ ದಕ್ಷಿಣದ ಸುಮಾರು ಒಂದು ಮಿಲಿಯನ್ ನಿವಾಸಿಗಳಿಗೆ ಸೇವೆಗಳನ್ನು ಒದಗಿಸುತ್ತದೆ ಎಂದು ಸೊರೊಕಾ ಆಸ್ಪತ್ರೆಯ ಮೇಲಿನ ಪರಿಣಾಮದ ಕುರಿತು ಮಾತನಾಡಿದ ವಕ್ತಾರರು ಹೇಳಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net