ಮಿಸ್​ ಯೂನಿವರ್ಸ್​ ಕರ್ನಾಟಕದಲ್ಲಿ ಲಲನೆಯರ ರಾಂಪ್​ ವಾಕ್​; ಮೇ.16ಕ್ಕೆ ಅಂತಿಮ ಸುತ್ತಿನ ಸ್ಪರ್ಧೆ

asc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು: 

ಐಟಿ ಸಿಟಿ, ಬಿಟಿ ಸಿಟಿ, ಸಿಲಿಕಾನ್​ ವ್ಯಾಲಿ, ಗಾರ್ಡನ್​ ಸಿಟಿ ಎಂದೆಲ್ಲ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ಫ್ಯಾಷನ್​ಗೂ ಹೆಸರುವಾಸಿ. ಇಲ್ಲಿ ಫ್ಯಾಷನ್​ ವೀಕ್​ ಸೇರಿ ಹಲವಾರು ಬಗೆಯ ಪೇಜೆಂಟ್​ಗಳು, ಸೌಂದರ್ಯ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಹೀಗಾಗಿಯೇ ಕೆಲವೊಮ್ಮೆ ಏಷ್ಯಾದ ಫ್ಯಾಷನ್​ ರಾಜಧಾನಿ ಎಂದೂ ಬೆಂಗಳೂರನ್ನು ಕರೆಯಾಗುತ್ತದೆ. ಇದೀಗ ಕರ್ನಾಟಕ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ‘ಮಿಸ್​ ಯೂನಿವರ್ಸ್​ ಕರ್ನಾಟಕ 2025‘ ಆಯೋಜಿಸಲಾಗಿದೆ.

ಇತ್ತೀಚೆಗಷ್ಟೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸುಂದರಿಯರ ಆಯ್ಕೆ ಪ್ರಕ್ರಿಯೆ ನಡೆಯಿತು. ಸುಮಾರು 100ಕ್ಕೂ ಹೆಚ್ಚು ಜನ ಸುಂದರಿಯರು ಪಾಲ್ಗೊಂಡಿದ್ದರು. ಹಿರಿಯ ರೂಪದರ್ಶಿಗಳಾದ ಜನನಿ ರಾಜನ್​, ಬಬಿತಾ ಪ್ರಕಾಶ್​, ಕಾವ್ಯ ಸಂಜು, ಅನಿಲ್​ ಶೆಟ್ಟಿ ಜ್ಯೂರಿಗಳಾಗಿ 30 ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದು, ಅವರು ಮಿಸ್​ ಯೂನಿವರ್ಸ್​ ಕರ್ನಾಟಕದಲ್ಲಿ ಹೆಜ್ಜೆ ಹಾಕಲಿದ್ದಾರೆ. ಹಿರಿಯ ರೂಪದರ್ಶಿ ನಂದಿನಿ ನಾಗರಾಜ್​ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅವರಿಗೆ ಉದ್ಯಮಿ ವೆಂಕಟೇಶ್​ ಸಾಥ್​ ನೀಡಿದ್ದಾರೆ.

‘ಮೇ 16ರಂದು ನಗರದಲ್ಲಿ ಅಂತಿಮ ಸುತ್ತಿನ ಸ್ಫರ್ಧೆ ನಡೆಯಲಿದೆ. ಅಂದು ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಿಂದಲೂ ಸ್ಫರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಕಿರೀಟ ವಿಜೇತರಾದವರನ್ನು ‘ಮಿಸ್ ಇಂಡಿಯಾ’ ಸ್ಫರ್ಧೆಗೆ ಸಿದ್ಧಗೊಳಿಸಲಾಗುವುದು. ಮಿಸ್ ಇಂಡಿಯಾ ಕಿರೀಟ ನಮ್ಮದಾಗಿಸಿಕೊಳ್ಳುವುದು ನಮ್ಮ ಮುಂದಿನ ಗುರಿ‘ ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ ಆಯೋಜಕಿ, ಹಿರಿಯ ರೂಪದರ್ಶಿ ನಂದಿನಿ ನಾಗರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net