ಹಿಂದು ರುದ್ರಭೂಮಿಯಲ್ಲಿನ ಸಮಾಧಿಗಳನ್ನು ವಿರೂಪಗೊಳಿಸಿದ ಎಸ್​ಡಿಪಿಐ?!

SDPI
Published on

ಕೋಲಾರ: ಶಾಲೆ, ಅಂಗಡಿ, ಪ್ರಾರ್ಥನಾ ಮಂದಿರಗಳಿಗೆ ಕಾಲಿಟ್ಟಿದ್ದ ಕೋಮುಸಂಘರ್ಷ ಇದೀಗ ಸ್ಮಶಾನಕ್ಕೂ ತಲುಪಿದ್ದು, ಹಿಂದು ರುದ್ರಭೂಮಿಯಲ್ಲಿನ ಸಮಾಧಿಗಳನ್ನು ವಿರೂಪಗೊಳಿಸಿ ವಿಕೃತಿ ಮೆರೆದ ಪ್ರಕರಣ ಕಂಡುಬಂದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಗಣಿಗುಂಟೆಪಾಳ್ಯದಲ್ಲಿ ಇರುವ ಬಲಿಜ ಸ್ಮಶಾನದಲ್ಲಿ ಇಂಥ ದುಷ್ಕೃತ್ಯಗಳು ನಡೆದಿವೆ. ಇಲ್ಲಿನ ಸಮಾಧಿ ಮತ್ತು ನಾಮಫಲಕಗಳ ನಾಮಫಲಕಗಳನ್ನು ವಿರೂಪಗೊಳಿಸಲಾಗಿದೆ. ಕೆಲವು ಸಮಾಧಿಗಳ ಮೇಲೆ ಎಸ್​ಡಿಪಿಐ ಎಂದು ಬರೆಯಲಾಗಿದೆ.

ಹೀಗೆ ಸುಮಾರು 30 ಸಮಾಧಿಗಳನ್ನು ವಿರೂಪಗೊಳಿಸಲಾಗಿದ್ದು, ಈ ಕುರಿತು ಶ್ರೀ ರಾಮ ಯುವಕ ರೈತ ಸಂಘ ಪೊಲೀಸರಿಗೆ ದೂರು ನೀಡಿದೆ. ಕಿಡಿಗೇಡಿಗಳು ನಮ್ಮ ಪೂರ್ವಜರಿಗೆ ಅಗೌರವ ತೋರಿದ್ದಲ್ಲದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ‌ ಉಂಟು ಮಾಡಿದ್ದಾರೆ. ಅಂಥವರನ್ನು ಪತ್ತೆ ಮಾಡಿ ಕಾನೂನುಕ್ರಮ ಜರುಗಿಸಬೇಕು ಎಂದು ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net