2ನೇ ಬಾರಿ ಚಿಕ್ಕ ಮಧುರೆ ಶನಿಮಹಾತ್ಮನ ಸನ್ನಿಧಿಗೆ ಮಾಂಸದ ಹಾರ ತಂದು ಸಿಕ್ಕಿಬಿದ್ದ ಕಿಡಿಗೇಡಿಗಳು!

Chikka Madhure Accused
Published on

ದೊಡ್ಡಬಳ್ಳಾಪುರ: ಎರಡನೇ ಬಾರಿಗೆ ಶನಿಮಹಾತ್ಮನ ದೇವಸ್ಥಾನಕ್ಕೆ ಮಾಂಸದ ಹಾರ ತಂದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲು ಯತ್ನಿಸಿದ ಕಿಡಿಗೇಡಿಗಳನ್ನು ದೇವಾಲಯದ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ದ ಚಿಕ್ಕ ಮಧುರೆ ದೇವಾಲಯದಲ್ಲಿ ನಡೆದಿದೆ. ದೇವಾಲಯವನ್ನು ಅಶುದ್ಧಿಗೊಳಿಸಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ. ಮಾಂಸದ ಹಾರ ಇಟ್ಟು ಪರಾರಿ ಆಗಲು ಯತ್ನಿಸಿದಾಗ ದೇವಾಲಯದ ಸಿಬ್ಬಂದಿಯ ಕೈಗೆ ಕಿಡಿಗೇಡಿಗಳು ಮತ್ತು ಸಂಸ್ಕಾರಹೀನರು ಸಿಕ್ಕಿಬಿದ್ದಿದ್ದಾರೆ.

ತಲೆಯಲ್ಲಿ ಮೆದುಳು ಹೊಂದಿರದ ಅವಿವೇಕಿಗಳು ಗುಲಾಬಿ‌ ಹಾರದಲ್ಲಿ ಮಾಂಸ‌ದ ತುಂಡುಗಳನ್ನು ಇಟ್ಟುಕೊಂಡು ದೇವಸ್ಥಾನಕ್ಕೆ ಬಂದಿದ್ದರು. ಅಂದಹಾಗೆ ಆ ಬುದ್ಧಿಗೇಡಿಗಳು ಯಾರೆಂದರೆ, ಹೊಸಕೋಟೆ ಸಮೀಪದ ಕಂಬಲಹಳ್ಳಿಯ ರಾಜು ಮತ್ತು ವೈಟ್ ಫೀಲ್ಡ್ ಮೂಲದ ಆಟೋ ಚಾಲಕ ಸೋಮಶೇಖರ್. ಇಂತಹ ದುರ್ಜನರಿಂದಲೇ ಶಾಂತಿ ನೆಲೆಸಿರುವ ಸಮಾಜದಲ್ಲಿ ಅಂಶಾಂತಿ ಉಂಟಾಗುವುದು.

ಈ ಆರೋಪಿಗಳ ಕೃತ್ಯ ಇದೇ ಮೊದಲೇನಲ್ಲ. ಈ ಹಿಂದೆಯು ಇದೆ ರೀತಿ ಕೃತ್ಯ ಎಸಗಿದ್ದರು. ಈ ಪುಂಡರ ಉದ್ಧಟತನಕ್ಕೆ ಏನೆನ್ನಬೇಕೋ ಕಾಣೆ. ದೇವಾಲಯದ ಒಳಗೆ ಮಾಂಸದ ಹಾರ ಇಟ್ಟು ಬಂದರೆ ಮೂರು ಸಾವಿರ ಹಣ ನೀಡುತ್ತೇವೆ ಎಂದು ಕಳಿಸಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ. ಹಣದಾಸೆಗೆ ಈ ಕೃತ್ಯ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಇದರಿಂದ ಸಮಾಜದ ಮೇಲೆ ಬೀರುವ ಪ್ರಭಾವವನ್ನು ಈ ಬುದ್ಧಿಗೇಡಿಗಳು ಕೊಂಚವೂ ಯೋಚಿಸಿಲ್ಲ. ಮೆದುಳು ಇದ್ದರೆ ತಾನೇ ಯೋಚಿಸುತ್ತಾರೆ.

ಶನಿವಾರ (ಮಾ.11) ಸಂಜೆ ಇದೇ ರೀತಿ ದೇವಾಲಯಕ್ಕೆ ಮಾಂಸದ ಹಾರ ತಂದು ದುಷ್ಕರ್ಮಿಗಳು ಸಿಕ್ಕಿಬಿದ್ದಿದ್ದಾರೆ. ಕೂಡಲೇ ಅವರನ್ನು ಹಿಡಿದು ದೊಡ್ಡ ಬೆಳವಂಗಲ ಪೊಲೀಸರಿಗೆ ದೇವಾಲಯದ ಸಿಬ್ಬಂದಿ ಒಪ್ಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮಧುರೆ ಶನಿ ಮಹಾತ್ಮ ದೇವಾಲಯ ಈ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದೆ. ಇಂತಹ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net