ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ತಂದೆ-ಮಗ

two people
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್: ಅಪ್ರಾಪ್ತ ಬಾಲಕಿಯ ಮೇಲೆ ತಂದೆ ಮತ್ತು ಮಗ ಇಬ್ಬರೂ ಸೇರಿ ಅತ್ಯಾಚಾರವೆಸಗಿದ ಘಟನೆ ತೆಲಂಗಾಣದ ಪೇಟಬಶೀರಾಬಾದ್ ಕೊಂಪಲ್ಲಿಯಲ್ಲಿ ನಡೆದಿದೆ.

ಇದನ್ನೂ ಓದಿ: ನಕಲಿ ದೇಸಿ ತುಪ್ಪ ತಯಾರಿಸುವವರ ವಿರುದ್ಧ ಕಠಿಣ ಕ್ರಮ: ಐವರಿಗೆ ಜೀವಾವಧಿ ಶಿಕ್ಷೆ

ಏಳು ವರ್ಷದ ಬಾಲಕಿ ವಾಸಿಸುತ್ತಿದ್ದ ಅದೇ ನೆರೆಹೊರೆಯವರಾದ ಶಿವ ಕುಮಾರ್ (45) ಮತ್ತು ಆತನ ಮಗ ಶೈಮಲ್ (19) ಎಂಬುವರು ಶಂಕಿತ ಆರೋಪಿಗಳಾಗಿದ್ದು, ಮೊಬೈಲ್ ಫೋನ್ ನೀಡುವ ನೆಪದಲ್ಲಿ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಘಟನೆಯನ್ನು ಯಾರಿಗೂ ಹೇಳದಂತೆ ಇಬ್ಬರೂ ಬಾಲಕಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇನ್ನು, ಬಾಲಕಿಯ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ ಬಾಲಕಿಯ ತಾಯಿ ವಿಚಾರಿಸಿದಾಗ ಬಾಲಕಿ ಗುರುವಾರ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಆಕೆಯ ತಾಯಿ ಪೇಟಬಶೀರಾಬಾದ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಏತನ್ಮಧ್ಯೆ, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಆಕೆಯ ಮಾನಸಿಕ ಆರೋಗ್ಯದ ಬೆಂಬಲಕ್ಕಾಗಿ ಸರ್ಕಾರಿ ಸಂಸ್ಥೆಯೊಂದರ ಸೌಲಭ್ಯಕ್ಕೆ ಕಳುಹಿಸಿ ಕೊಡಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net