ಅನುದಾನ ಲೂಟಿಗೆ ಸಚಿವರ ಆತ್ಮೀಯರೇ ಏಜೆಂಟರು; ಮಾಜಿ ಸಿಎಂ ಸದಾನಂದಗೌಡ ಆರೋಪ

sadanandagowda
Published on

ಬೆಂಗಳೂರು: ವ್ಯವಸ್ಥಿತವಾಗಿ ಖಜಾನೆ ಕೊಳ್ಳೆ ಹೊಡೆಯಲು ಬಹುತೇಕ ಸಚಿವರು ಪ್ಲ್ಯಾನ್ ಆ್ ಆ್ಯಕ್ಷನ್ ರೂಪಿಸಿಕೊಂಡಿದ್ದಾರೆ. ಕೃಷಿ ಇಲಾಖೆ ಮಂಡ್ಯದಿಂದಲೇ ಇದು ಆರಂಭವಾಗಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಗಂಭೀರ ಆರೋಪ ಮಾಡಿದರು.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಇಲಾಖೆಗೆ ಮಂಜೂರಾದ ಅನುದಾನ ಲೂಟಿಗೆ ಹಲವು ಸಚಿವರ ಮಧ್ಯೆ ಪೈಪೋಟಿ ಏರ್ಪಟ್ಟದಂತಿದೆ. ಬಹಳಷ್ಟು ಸಚಿವರಿಗೆ ಅವರ ಆತ್ಮೀಯರೇ ಏಜೆಂಟರಾಗಿ ನೇಮಕವಾಗಿದ್ದಾರೆ ಎಂದರು.

ಶಕ್ತಿ ಯೋಜನೆಗೆ ಭಾರಿ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ನಿತ್ಯವೂ ಲಕ್ಷಾಂತರ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಸಾರಿಗೆ ನಿಗಮಗಳ ಬಸ್ ಟಿಕೆಟ್ ಹರಿದು ಬಿಸಾಕುವುದರಲ್ಲಿ ಎಲ್ಲರಿಗೂ ಪಾಲಿದೆ ಎಂದು ನಿಗೂಢವಾಗಿ ಹೇಳಿದರು.

ಜನರಿಂದಲೇ ತಕ್ಕಪಾಠ

ಪುಲ್ವಾಮಾ ದಾಳಿಯಿಂದ ಮೋದಿ ಗೆದ್ದರು ಎನ್ನುವ ಮೂಲಕ ಸೈನಿಕರ ಬಗ್ಗೆ ಕೀಳಾಗಿ ಮಾತನಾಡಿದ ಶಾಸಕ ಎಚ್.ಸಿ.ಬಾಲಕೃಷ್ಣಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌ನವರಲ್ಲಿ ಇನ್ನೂ ಬ್ರಿಟಿಷರ ರಕ್ತವಿದೆ ಎಂದು ಆಗಾಗ್ಗೆ ನೆನಪಿಸುತ್ತಾರೆ.

ಕಾಂಗ್ರೆಸ್‌ನಲ್ಲಿ ಆಂತರಿಕ ಜಗಳ, ಸಿಎಂ ಹುದ್ದೆಗೆ ಪೈಪೋಟಿ, ನೂರಾರು ಗೊಂದಲಗಳಿವೆ. ಮಂತ್ರಿ ಸ್ಥಾನ ಸಿಗುವುದಿಲ್ಲವೆಂಬ ಹತಾಶೆಯಲ್ಲಿ ಬಾಲಕೃಷ್ಣ ಏನೇನೋ ಮಾತನಾಡಿದ್ದಾರೆ ಎಂದು ಸದಾನಂದ ಗೌಡ ಕುಟುಕಿದರು.

ಕೆಸರು ನೀರಿನಲ್ಲಿ ಬಿದ್ದ ಕೋಣಗಳಿಗೆ ಒಂದೆರಡು ಏಟು ಬಿದ್ದರೂ ಎಚ್ಚರವಾಗಲ್ಲ. ನಾಲ್ಕೈದು ಏಟುಗಳು ಬಿದ್ದ ನಂತರ ಕೋಣಗಳು ಎಚ್ಚೆತ್ತುಕೊಳ್ಳುತ್ತಿವೆ. ಸದ್ಯಕ್ಕೆ ಕಾಂಗ್ರೆಸ್‌ನ ಪರಿಸ್ಥಿತಿಯಿದು ಎಂದು ವ್ಯಂಗ್ಯವಾಡಿದರು.

ಸಹಜ ಸ್ಥಿತಿ ವಿಶ್ವಾಸ

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ೋಷಿಸಿದ ಬಳಿಕ ಅನೇಕರು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದತ್ತ ಆಸಕ್ತಿ ತೋರಿಸುತ್ತಿರುವುದು ನಿಜ. ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರನ್ನು ವರಿಷ್ಠರು ಆರು ತಿಂಗಳ ಮುಂಚೆಯೇ ೋಷಿಸಿದರೆ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಹಿರಿಯರಾದ ವಿ.ಸೋಮಣ್ಣ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರವರ ಭಾವನೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಯಾರೊಬ್ಬರೂ ಪಕ್ಷದ ವಿರುದ್ಧ ಮಾತನಾಡಿಲ್ಲ ಎನ್ನುವುದು ಗಮನಾರ್ಹ.

ನಾನು ಪಕ್ಷದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲೂ ಯಡಿಯೂರಪ್ಪ ಬಣ, ಅನಂತಕುಮಾರ್ ಬಣ ಎಂದು ಜೋರಾಗಿತ್ತು. ಆದರೆ ಅದೆಲ್ಲವನ್ನೂ ನಿಭಾಯಿಸಿದೆ, ಈಗಲೂ ಅಷ್ಟೇ ಸಣ್ಣಪುಟ್ಟ ಸಮಸ್ಯೆ, ಗೊಂದಲಗಳಿವೆ. ಮುಂದಿನ ದಿನಗಳಲ್ಲಿ ಸಹಜ ಸ್ಥಿತಿಗೆ ಬರಲಿದೆ ಎಂದು ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net