

ಮಧ್ಯಪ್ರದೇಶ: ಮಧ್ಯಪ್ರದೇಶದ ಹಣಕಾಸು ಸಚಿವ ಜಗದೀಶ್ ದೇವ್ರಾ ಅವರು ಕಬಡ್ಡಿ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಯುವ ಆಟಗಾರನೊಬ್ಬ ಸಚಿವರ ಕಾಲನ್ನು ಹಿಡಿದಿರುವುದನ್ನು ಮತ್ತು ಸಚಿವ ದೇವ್ರಾ ಮಿಡ್ಲೈನ್ ಅನ್ನು ಮುಟ್ಟಲು ಸಾಧ್ಯವಾಗದಿರುವುದನ್ನು ತೋರಿಸುತ್ತದೆ.
ಸಂಸದ್ ಖೇಲ್ ಮಹೋತ್ಸವ್ ಕಾರ್ಯಕ್ರಮದ ಅಂಗವಾಗಿ ನಡೆದ ಕಬಡ್ಡಿ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ. ಕ್ರೀಡಾಕೂಟದ ವೇಳೆ ಯುವಕರು ಕಬಡ್ಡಿ ಆಡುವುದನ್ನು ನೋಡಿದ ಹಣಕಾಸು ಸಚಿವರೂ ಕ್ರೀಡಾಂಗಣಕ್ಕೆ ಇಳಿದರು.
65 ವರ್ಷ ವಯಸ್ಸಿನ ಸಚಿವರು ವೀಡಿಯೊದಲ್ಲಿ ಉತ್ತಮವಾಗಿ ಆಟನ್ನು ಆರಂಭಿಸಿದ್ದು ಆದರೆ ಬಾಲ್ಕ್ ಲೈನ್ ಬಳಿ ಆಟದಿಂದ ಔಟ್ ಆಗಿದ್ದಾರೆ. ಇದಾದ ಬಳಿಕ ಕಾಲು ಹಿಡಿದ ವಿದ್ಯಾರ್ಥಿಯನ್ನು ವಿತ್ತ ಸಚಿವರು ಶ್ಲಾಘಿಸಿದರು.
ಮಧ್ಯಪ್ರದೇಶದ ಮಂದಸೌರ್ ಸಂಸದೀಯ ಜಿಲ್ಲೆಯಲ್ಲಿ, 8 ವಿಧಾನಸಭೆಯ 95 ಸ್ಥಳಗಳಲ್ಲಿ ಸಂಸದ್ ಖೇಲ್ ಮಹೋತ್ಸವ ನಡೆಯುತ್ತಿದೆ. ಈ ಕ್ರೀಡಾಕೂಟವು ಏಪ್ರಿಲ್ 26 ರವರೆಗೆ ಮುಂದುವರಿಯುತ್ತದೆ. ಕ್ರೀಡಾ ಹಬ್ಬದಲ್ಲಿ ಸಾಂಪ್ರದಾಯಿಕ ಕ್ರೀಡೆಗಳಾದ ಖೋ-ಖೋ, ಕಬಡ್ಡಿ, ಟಗ್ ಆಫ್ ವಾರ್, ಮ್ಯಾರಥಾನ್ ಮತ್ತು ಸಿತೌಲಿಯಾ ನಡೆಯಲಿದೆ. (ಏಜೆನ್ಸೀಸ್)