ನಾಳೆಯ ಬಜೆಟ್'ಅನ್ನು ಕನ್ನಡ ಚಿತ್ರರಂಗ ಯಾವತ್ತೂ ಮರೆಯೋದಿಲ್ಲ: ಮುನಿರತ್ನ

cm pic
Published on

ಬೆಂಗಳೂರು: 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಭವನದಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಾಳೆ ಬಜೆಟ್ ಇದ್ದರೂ ಕೂಡ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅಲ್ಲದೇ 05 ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾವು ಐದನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಚಿವ ಮುನಿರತ್ನ, ನಾಳೆ ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಹಿ ಸುದ್ದಿ ಇದೆ. ನಾಳೆ ಬಜೆಟ್ ಮಂಡನೆ ಆದ ತಕ್ಷಣ ನಿಮಗೆ ಗೊತ್ತಾಗುತ್ತೆ. ಈ ಬಜೆಟ್ ನ ಚಿತ್ರರಂಗ ಯಾವತ್ತೂ ಮರೆಯೋದಕ್ಕೆ ಆಗಲ್ಲ. ಕನ್ನಡ ಚಿತ್ರರಂಗ ಸಾಕಷ್ಟು ಬೇಡಿಕೆಗಳನ್ನ ಸರ್ಕಾರದ ಮುಂದೆ ಇಟ್ಟಿದ್ದರು. ಕನ್ನಡ ಚಿತ್ರೋದ್ಯಮದ ಯಾವೆಲ್ಲಾ ಬೇಡಿಕೆಗಳನ್ನ ಸರ್ಕಾರ ಈಡೇರಿಸ್ತಿದೆಯೋ ಗೊತ್ತಿಲ್ಲ. ಆದರೆ, ಸ್ವೀಟ್ ನ್ಯೂಸ್ ಇದೆ ಎಂದು ಹೇಳಿ ಬಜೆಟ್ ನತ್ತ ಕಣ್ಣರಳಿಸಿ‌ ನೋಡುವಂತೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net