ಸರ್ಕಾರ ಪತನವಾಗುವ ಆತಂಕ ವ್ಯಕ್ತಪಡಿಸಿದ ಶಾಸಕನಿಗೆ ಧೈರ್ಯ ತುಂಬಿದ ಸಚಿವ ಚಲುವರಾಯಸ್ವಾಮಿ!

Chaluvarayaswamy
Published on

ಮಂಡ್ಯ: ಸರ್ಕಾರ ಪತನವಾಗುವ ಆತಂಕ ವ್ಯಕ್ತಪಡಿಸಿದ ಶಾಸಕನಿಗೆ ಬಹಿರಂಗ ವೇದಿಕೆಯಲ್ಲೇ ಸಚಿವ ಚಲುವರಾಯಸ್ವಾಮಿ ಅವರು ಆತ್ಮಸ್ಥೈರ್ಯ ತುಂಬಿದ ಪ್ರಸಂಗ ನಡೆದಿದೆ.

ಮಂಡ್ಯದಲ್ಲಿ ನಿನ್ನೆ (ಆ.5) ನಡೆದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನಾವು ಇರ್ತೀವೋ ಇಲ್ವೋ? ಎನ್ನುವ ಮೂಲಕ ಸರ್ಕಾರ ಪತನದ ಭೀತಿಯನ್ನು ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ವ್ಯಕ್ತಪಡಿಸಿದರು.

ಈ ವೇಳೆ ಶಾಸಕನಿಗೆ ಧೈರ್ಯ ತುಂಬಿದ ಚಲುವರಾಯಸ್ವಾಮಿ, ನಮ್ಮ ಸರ್ಕಾರ ಐದು ವರ್ಷವೂ ಇರುತ್ತೆ ಎಂದರು. ನಾವು ಐದು ಭರವಸೆಯನ್ನು ಈಡೇರಿಸಿ ಸುಭದ್ರ ಸರ್ಕಾರ ರಚನೆ ಮಾಡಿದ್ದೇವೆ ಎಂದು ಹೇಳಿದರು.

ನಾವು ಇರ್ತೀವೋ ಇಲ್ವೋ ಅಂತ ರವಿ ಪದೇ ಪದೇ ಹೇಳ್ತಾ ಇದ್ದ. ಅವನಿಗೆ ಯಾಕೆ ಆ ರೀತಿ ಮಾತು ಬರುತ್ತಿದೆ ಎಂದು ನನಗೆ ಗೊತ್ತಿಲ್ಲ. ಇಷ್ಟೆಲ್ಲ ಕಾರ್ಯಕ್ರಮ ಕೊಟ್ಟರೂ ಕಾಂಗ್ರೆಸ್ ಸರ್ಕಾರ ಮುಂದುವರೆಯಲ್ಲ ಎಂಬ ಅಪನಂಬಿಕೆ ಯಾಕೆ ಬಂತು ಅಂತ ಗೊತ್ತಿಲ್ಲ. ಆದರೆ, ಇನ್ಮುಂದೆ ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಲು ಬಿಜೆಪಿ ಅಥವಾ ಜೆಡಿಎಸ್‌ನಿಂದಾಗಲಿ ಸಾಧ್ಯವಿಲ್ಲ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net