

ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಡೇನಿಯಲ್ ವ್ಯಾಟ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಶೇಷ ಘೋಷಣೆಯೊಂದನ್ನು ಮಾಡಿದ್ದಾರೆ. ಜಾರ್ಜಿ ಹಾಡ್ಜ್ ಎಂಬುವರ ಜತೆ ವ್ಯಾಟ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ತಮ್ಮ ಸಂಗಾತಿಯ ತುಟಿಗೆ ಚುಂಬಿಸುತ್ತಾ ಎಂಗೇಜ್ಮೆಂಟ್ ರಿಂಗ್ ಪ್ರದರ್ಶಿಸುತ್ತಿರುವ ಫೋಟೋವನ್ನು ವ್ಯಾಟ್ ಅವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಂದೆಂದಿಗೂ ನನ್ನದು ಎಂದು ಅಡಿಬರಹ ನೀಡಿದ್ದಾರೆ.
ಅಂದಹಾಗೆ ಜಾರ್ಜಿ ಹಾಡ್ಜ್ ಅವರು ಸಿಎಎ ಬೇಸ್ನಲ್ಲಿ ಮಹಿಳಾ ಫುಟ್ಬಾಲ್ನ ಮುಖ್ಯಸ್ಥರಾಗಿದ್ದಾರೆ ಮತ್ತು ಲಂಡನ್ನಲ್ಲಿ ಎಫ್ಎ ಪರವಾನಗಿ ಪಡೆದ ಏಜೆಂಟ್ ಆಗಿದ್ದಾರೆ. 31 ವರ್ಷ ವ್ಯಾಟ್, ಇಂಗ್ಲೆಂಡ್ ಮಹಿಳಾ ತಂಡದ ಪರವಾಗಿ 102 ಏಕದಿನ ಮತ್ತು 143 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಮಹಿಳೆಯರ ಟ್ವೆಂಟಿ-20 ವಿಶ್ವಕಪ್ನಲ್ಲಿ ವ್ಯಾಟ್ ತಂಡದ ಭಾಗವಾಗಿದ್ದಾರು. ಇತ್ತೀಚೆಗೆ ನಡೆದ ಕೇಬಲ್ ಕಾರು ಅಪಘಾತದ ಭಯಾನಕ ಅನುಭವವನ್ನು ಬಹಿರಂಗಪಡಿಸಿದ್ದರು.
ನಗರದ ಮೇಲಿರುವ ಪ್ರಸ್ಥಭೂಮಿಯ ವರೆಗೆ 1,000 (3,200 ಅಡಿ) ಮೀಟರ್ಗೂ ಹೆಚ್ಚು ಸುತ್ತುವ ಸವಾರಿಯಲ್ಲಿ ವ್ಯಾಟ್ ಮತ್ತು ಅವರ ತಂಡದ ಸದಸ್ಯರು ಇತ್ತೀಚೆಗೆ ಸೇರಿಕೊಂಡರು. ನಾವು ಕೇಬಲ್ ಕಾರ್ ಹತ್ತುವ ಮೊದಲು ಕೆಲವು ತಾಂತ್ರಿಕ ಸಮಸ್ಯೆಗಳು ನನ್ನನ್ನು ತುಂಬಾ ಉದ್ವಿಗ್ನಗೊಳಿಸಿದವು ಮತ್ತು ತೇಲಾಡಿಸಿತು. ನಿಜಕ್ಕೂ ಇದು ಭಯಾನಕ ಅನುಭವವಾಗಿದೆ. ನಾನು ಆ ಪರ್ವತವನ್ನು ಶೀಘ್ರದಲ್ಲೇ ಮತ್ತೆ ಏರುತ್ತೇನೆ ಎಂದು ಭಾವಿಸುವುದಿಲ್ಲ. ನಾನು ಇನ್ನೆಂದೂ ಆ ಕೇಬಲ್ ಕಾರಿನಲ್ಲಿ ಹೋಗುವುದಿಲ್ಲ. ಲೋಡ್ ಶೆಡ್ಡಿಂಗ್ನಿಂದ ಒಮ್ಮೆ ಕರೆಂಟ್ ಹೋದರೆ ಮುಗಿಯಿತು ಎಂದು ಹೇಳಿಕೊಂಡಿದ್ದರು. (ಏಜೆನ್ಸೀಸ್)