ಹಾಲು ಉತ್ಪಾದನೆ ಜತೆ ಬ್ಯಾಂಕಿಂಗೂ ಉತ್ತೇಜನ

milk-3

ವಿಜಯವಾಣಿ ಸುದ್ದಿಜಾಲ ಕೋಟ

ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಹೈನುಗಾರಿಕಾ ಕ್ಷೇತ್ರ ಕ್ಷೀಣಿಸುತ್ತಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಹಾಲು ಉತ್ಪಾದಕರ ಕೇಂದ್ರಗಳು ಮುಚ್ಚುವ ಭೀತಿ ಎದುರಾಗಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಹಕಾರಿ ಹಾಲು ಉತ್ಪಾದಕರ ಕೇಂದ್ರಗಳು ಪರ್ಯಾಯ ವ್ಯವಸ್ಥೆಗಳನ್ನು ಅವಲಂಬಿಸಲು ಸಿದ್ಧತೆ ನಡೆಸಿವೆ.

ಬ್ರಹ್ಮಾವರ ತಾಲೂಕು ಒಂದರಲ್ಲೆ 78 ಹಾಲು ಉತ್ಪಾದಕರ ಸಂಘಗಳಿವೆ. ಆದರೆ ಅಲ್ಲಿ 175 ನೌಕರ ಸಿಬ್ಬಂದಿ ಇದ್ದಾರೆ. ಪ್ರಸ್ತುತ ತಾಲೂಕಿನ ಎಲ್ಲ ಸಹಕಾರಿ ಹಾಲು ಉತ್ಪಾದಕ ಕೇಂದ್ರಗಳು ಹಾಲು ಖರೀದಿಸುವ ಜತೆಗೆ ಆರ್ಥಿಕ ವ್ಯವಹಾರಕ್ಕೆ ಮುಂದಾಗಿದ್ದು, ಈಗಾಲೇ ಹಾಲು ಉತ್ಪಾದಕರ ನೌಕರರ ಒಕ್ಕೂಟ ಒಂದು ಸುತ್ತಿನ ಸಭೆ ನಡೆಸಿದ್ದು, ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಹಳ್ಳಿಗಳಲ್ಲಿ ಅನೇಕ ಕುಟುಂಬಗಳು ಹೈನುಗಾರಿಕೆಯನ್ನೆ ಪ್ರಮುಖ ಆದಾಯವಾಗಿಸಿಕೊಂಡಿದ್ದು, ಹೈನುಗಾರಿಕೆಗೆ ಬಲ ತುಂಬಲು ಪ್ರಸ್ತುತ ಸರ್ಕಾರದ ಪ್ರೋತ್ಸಾಹ ಅವಶ್ಯಕ.

ಹಾಲು ಉತ್ಪಾದನೆ ಇಳಿಮುಖವಾಗುತ್ತಿದೆ. ಮೂರು ನಾಲ್ಕು ಸಿಬ್ಬಂದಿ ಇರುವ ಸಹಕಾರಿ ಸಂಘಗಳು ಬದಲಿ ಮಾರ್ಗಗಳತ್ತ ಮುಖ ಮಾಡಿದ್ದು, ಆರ್ಥಿಕ ವ್ಯವಹಾರಕ್ಕಾಗಿ ಬ್ಯಾಂಕಿಂಗ್ ಕ್ಷೇತ್ರಗಳ ಮೂಲಕ ಸಂಘದ ಹಾಲು ಉತ್ಪಾದನೆಗೆ ಪ್ರೋತ್ಸಾಹಿಸಿಕೊಂಡು ಗ್ರಾಹಕರಿಗೆ ಆರ್ಥಿಕ ವ್ಯವಹಾರಕ್ಕೂ ಅವಕಾಶ ಕಲ್ಪಿಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ನೀತಿಗಳನ್ನು ಸಂಘದ ಬೈಲಾದಲ್ಲಿ ತಿಳಿಸಲಾಗಿದೆ.

ಸಂಘಗಳು ಬ್ಯಾಂಕ್ ಆಗಿ ಕಾರ್ಯನಿರ್ವಹಿಸುವುದು ಉತ್ತಮ ವಿಚಾರ. ಆದರೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮಂಗಳೂರು ಹಾಲು ಒಕ್ಕೂಟದ ಆರ್ಥಿಕ ಬೆಂಬಲಬೇಕು. ಇದರಿಂದ ರೈತ ಉತ್ಪಾದಕರಿಗೆ ಲಾಭ ಸಿಕ್ಕಿದರೆ ಒಳಿತು ಆಗಬಹುದು.
-ಕೆ.ಶಿವಮೂರ್ತಿ ಅಧ್ಯಕ್ಷ, ಕೋಟತಟ್ಟು ಪಡುಕೆರೆ ಹಾಲು ಉತ್ಪಾದಕರ ಸಹಕಾರ ಸಂಘ

ಹಾಲು ಉತ್ಪಾದಕರ ಸಹಕಾರಿ ಸಂಘಗಳು ಆರ್ಥಿಕ ವ್ಯವಹಾರ ನಡೆಸುವುದರ ಜತೆಗೆ ಬ್ಯಾಂಕ್‌ಗಳಾಗಿ ಪರಿವರ್ತನೆಗೊಂಡರೆ ನಮ್ಮ ವ್ಯವಹಾರಕ್ಕೆ ಅನುಕೂಲವಾಗುತ್ತದೆ. ಹಾಲಿನ ಹಣಕ್ಕಾಗಿ ನಾವು ಸಾಸ್ತಾನಕ್ಕೆ ಹೋಗಬೇಕಾಗಿದ್ದು, ಹೊಸ ಚಿಂತನೆಯಿಂದ ಸಮಯ, ಹಣ ಉಳಿಯುತ್ತದೆ.
ದಾಕ್ಷಾಯಿಣಿ ಕೆ.ಎಸ್, ಹಾಲು ಉತ್ಪಾದಕಿ ಪಾಂಡೇಶ್ವರ

ಸಂಘಗಳಲ್ಲಿ ಹಾಲಿನ ಪ್ರಮಾಣ ಕುಸಿಯುವುದರಿಂದ ಹೈನುಗಾರಿಕೆ ಮೇಲೆ ನೇರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಂಘಗಳಲ್ಲಿರುವ ಉದ್ಯೋಗಿಗಳೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಹಾಲು ಉತ್ಪಾದಕರ ಸಂಘಗಳು ಹಾಲಿನ ವ್ಯವಹಾರದ ಜತೆಗೆ ಆರ್ಥಿಕ ವ್ಯವಹಾರ ಆರಂಭಿಸಿದ್ದೇವೆ.
ರಾಕೇಶ್ ನಾಯಕ್, ಅಧ್ಯಕ್ಷ, ತಾಲೂಕು ನೌಕರರ ಒಕ್ಕೂಟ ಬ್ರಹ್ಮಾವರ

ಸಹಕಾರಿ ಹಾಲು ಉತ್ಪಾದಕರ ಸಂಘಗಳು ಬ್ಯಾಂಕ್ ಆಗಿ ಪರಿವರ್ತನೆಗೊಳಿಸುವ ಕುರಿತು ತಮ್ಮ ಇಲಾಖೆಗೆ ಲಿಖಿತ ಮನವಿಗಳು ಇದುವರೆಗೆ ಬಂದಿಲ್ಲ. ಒಂದು ವೇಳೆ ಬಂದರೆ ಕೇಂದ್ರ ಕಚೇರಿಗೆ ಬರೆದು ಅವರ ಅನುಮತಿ ಪಡೆದ ನಂತರ ಕ್ರಮ ಕೈಗೊಳ್ಳಲಿದೆ.
-ಕೆ.ಆರ್ ಲಾವಣ್ಯ ಸಹಕಾರ ಸಂಘಗಳ ಉಪನಿಬಂಧಕರು ಉಡುಪಿ ಜಿಲ್ಲೆ

ಹೈನುಗಾರಿಕೆಯ ಉತ್ತೇಜಿಸುವ ಉದ್ದೇಶದಿಂದ ಆರ್ಥಿಕ ವ್ಯವಹಾರ ಒಳ್ಳೆಯದೇ. ಸಂಘದ ಬೈಲಾದಲ್ಲಿರುವ ನಿಯಮಗಳನ್ನು ಅನುಸರಿಸಿ ಆರ್ಥಿಕ ವ್ಯವಹಾರ ನಡೆಸಿದರೆ ಒಕ್ಕೂಟದಿಂದ ಅಭ್ಯಂತರವಿಲ್ಲ.
ಸುಚರಿತ ಶೆಟ್ಟಿ, ಅಧ್ಯಕ್ಷ, ದ.ಕ ಹಾಲು ಉತ್ಪಾದಕರ ಒಕ್ಕೂಟ

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…