ಖ್ಯಾತ ಗಾಯಕ ಮಿಕಾಸಿಂಗ್​​ಗೆ ಕೂಡಿ ಬಂತು ಕಂಕಣ ಭಾಗ್ಯ, "ಸ್ವಯಂವರ" ದಲ್ಲಿ ಆಯ್ಕೆಯಾದ ವಧು ಯಾರು?

Mikha 1
Published on

ಮುಂಬೈ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಗಾಯಕ ಮಿಕಾ ಸಿಂಗ್​ ನಡೆಸಿದ ಸ್ವಯಂವರ ಕಾರ್ಯಕ್ರಮ ಅಂತಿಮ ಪ್ರಸಾರ ಕಂಡಿದ್ದು, ಇದರಲ್ಲಿ ಗಾಯಕ ಮಿಕಾ ಕೊನೆಗೂ ವಧುವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಫೈನಲ್​ ಎಪಿಸೋಡ್​ ಭಾನುವಾರ ಚಿತ್ರೀಕರಣಗೊಂಡಿದ್ದು, ಆಕಾಂಕ್ಷಾ ಪೂರಿ ಎಂಬುವರನ್ನು ತನ್ನ ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಫೈನಲ್​ ಎಪಿಸೋಡ್​ ಸೋಮವಾರ ಟಿವಿಯಲ್ಲಿ ಪ್ರಸಾರಗೊಳ್ಳಲಿದೆ.

ರಾಖಿ ಸಾವಂತ್ ಮತ್ತು ರಾಹುಲ್​ ಮಹಾಜನ್​ ಬಳಿಕ ಮಿಕಾಸಿಂಗ್​ ಸ್ವಯಂವರ ಕಾರ್ಯಕ್ರಮ ನಡೆಸಿದ್ದಾರೆ. ಈ ಶೋ ಬಾಲಿವುಡ್​ಗೆ ಹೊಸತೇನೂ ಅಲ್ಲ. ಈ ಹಿಂದೆ ನಡೆಸಿದ ಎರಡೂ ಕಾರ್ಯಕ್ರಮ ಜನಪ್ರಿಯಗೊಂಡಿತ್ತು. ಈ ಬಾರಿಯೂ ಜನಪ್ರಿಯ ಶೋಗಳಲ್ಲಿ ಒಂದಾಗಿದ್ದು, ಮಿಕಾ ಯಾರನ್ನೂ ಒರಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮೂಲಗಳ ಪ್ರಕಾರ ಆಕಾಂಕ್ಷಾಳನ್ನು ಆಯ್ಕೆ ಮಾಡಿಕೊಂಡ ಮಿಕಾ ಪರದೆಯ ಮೇಲೆ ವಿವಾಹವಾಗದೇ ಉಂಗುರ ಮಾತ್ರ ತೊಡಿಸಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಆಕಾಂಕ್ಷಾ ಮಿಕಾ ನಡುವೆ 12 ವರ್ಷಗಳ ಸ್ನೇಹವಿತ್ತು ಎಂದೂ ಹೇಳಾಗಿದೆ.

ಈ ಹಿಂದೆ ರಾಖಿ ಸಾವಂತ್​ ನಡೆಸಿದ ಸ್ವಯಂವರ, ಅದೊಂದು ರಿಯಾಲಿಟಿ ಶೋ ಮಾತ್ರ ಆಗಿತ್ತು ಎಂಬ ಹೇಳಿಕೆ ನೀಡುವ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿತ್ತು. ಇದಾದ ಬಳಿಕ ರಾಹುಲ್​ ಮಹಾಜನ್​ ಕೂಡ ಇದೇ ಕಾರ್ಯಕ್ರಮದಲ್ಲಿ ವಧುವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಈ ಜೋಡಿ ನಿಜಕ್ಕೂ ಮದುವೆಯಾಗಿತ್ತು. ಕೆಲ ದಿನಗಳ ಬಳಿಕ ವಿಚ್ಛೇದನದಿಂದ ದೂರವಾಗಿತ್ತು.

ಒಟ್ಟಾರೆ ಸ್ವಯಂವರ ರಿಯಾಲಿಟಿ ಶೋ ಮೂಲಕ ವಧುವನ್ನು ಆಯ್ಕೆ ಮಾಡಿಕೊಂಡಿರುವ ಮಿಕಾಸಿಂಗ್​ ಕೂಡ ನಿಜಕ್ಕೂ ಮದುವೆಯಾಗುತ್ತಾರಾ ಅಥವಾ ಕೇವಲ ಪ್ರಚಾರಕ್ಕಾಗಿ ಈ ಕಾರ್ಯಕ್ರಮ ನಡೆಸಿರಬಹುದೇ ಎಂಬುದಕ್ಕೆ ಗಾಯಕ ಮಿಕಾ ಸಿಂಗ್​​ ಮಾತ್ರ ಉತ್ತರಿಸಬೇಕು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net