RCB ಕುರಿತು ಅವಮಾನಕರ ಹೇಳಿಕೆ ನೀಡಿದ ಸಿಎಸ್​ಕೆ ನಾಯಕ; ಫ್ಯಾನ್ಸ್​ ಕೆಂಡಾಮಂಡಲ

Ruturaj Gaikwad
Published on

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್​ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ತಂಡಗಳು ಟೂರ್ನಿಗೆ ಸಂಬಂಧಿಸಿದ ತಯಾರಿಯನ್ನು ಆರಂಭಿಸಿದೆ. 18ನೇ ಆವೃತ್ತಿಯಲ್ಲಿ ಕಪ್​ ಗೆಲ್ಲಲೇಬೇಕೆಂದು ಫ್ರಾಂಚೈಸಿಗಳು ಬಲಿಷ್ಠ ತಂಡವನ್ನೇ ಕಟ್ಟಿದ್ದು, ಆರ್​ಸಿಬಿ ತಂಡ ಕೂಡ ಒಂದಾಗಿದೆ. ಅಭಿಮಾನಿಗಳು ಬಹುವರ್ಷದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆರ್​ಸಿಬಿ (RCB) ಫ್ರಾಂಚೈಸಿಯು ಈ ಬಾರಿಯ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಿದ್ದು, ಬಲಿಷ್ಠ ಪಡೆಯನ್ನ ಕಟ್ಟುವ ಮೂಲಕ ಈ ಬಾರಿ ಕಪ್​ ಗೆಲ್ಲುವ ವಿಶ್ವಾಸವನ್ನು ಮೂಡಿಸಿದೆ.

ಇನ್ನೂ ಐಪಿಎಲ್​ ಇತಿಹಾಸದಲ್ಲೇ ಆರ್​ಸಿಬಿ (RCB)  ಹಾಗೂ ಚೆನ್ನೈ (CSK) ಪ್ರಾಂಚೈಸಿಗಳು ಬದ್ಧವೈರರಿಗಳೆಂದು ಪರಿಗಣಿಸಿದ್ದು, ಪ್ರತಿಬಾರಿ ಹೈವೊಲ್ಟೇಜ್​ ಪಂದ್ಯ ನಡೆದಾಗಲೆಲ್ಲಾ ಟಿಆರ್​ಪಿ ಹಾಗೂ ವೀಕ್ಷಣೆ ವಿಚಾರವಾಗಿ ದಾಖಲೆ ಬರೆದಿದೆ. ಆದರೆ, ಇದೀಗ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಋತುರಾಜ್​ ಗಾಯಕ್ವಾಡ್ ಆರ್​ಸಿಬಿ ಅಭಿಮಾನಿಗಳನ್ನು​ ಅವಮಾನಿಸುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಎಸ್​ಕೆ ನಾಯಕ ಋತುರಾಜ್​ (Ruturaj Gaikwad) ಅವರನ್ನು ಮಾತನಾಡುವಂತೆ ವೇದಿಕೆಗೆ ಆಹ್ವಾನಿಸಲಾಗಿತ್ತು. ಈ ವೇಳೆ ಋತುರಾಜ್​ಗೆ ಪ್ರಶ್ನಗೆಳನ್ನು ಕೇಳಲಾಗಿತ್ತು. ಪ್ರಶ್ನೆಗೆ ಉತ್ತರಿಸಲು ಮುಂದಾದಾಗ ಋತುರಾಜ್​ ಅವರ ಮೈಕ್​ ಆಪ್​ ಆಗಿತ್ತು. ಇದರಿಂದ ಋತುರಾಜ್​ಗೆ ತೀವ್ರ ಇರುಸುಮುರುಸು ಉಂಟಾಯಿತು.

ಈ ವಿಚಾರವಾಗಿ ನಿರೂಪಕರು ಮೈಕ್​ ಆಪರೇಟರ್​ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ತಕ್ಷಣವೇ ಉತ್ತರಿಸಿದ ಋತುರಾಜ್​ ಬಹುಶಃ ಅವರು ಆರ್​ಸಿಬಿಯಿಂದ (RCB) ಬಂದಿರಬೇಕು ಹೇಳಿದ್ದಾರೆ. ಈ ವಿಡಿಯೋ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಋತುರಾಜ್​ ವಿರುದ್ಧ ಸಮರ ಸಾರಿಸಿದ್ದಾರೆ. ಅನೇಕರು ಋತುರಾಜ್​ರನ್ನು ಟ್ರೋಲ್​ ಮಾಡಿದ್ದು, ನಿಮ್ಮ ನಾಯಕತ್ವದಲ್ಲಿ ತಂಡ ಪ್ಲೇಆಫ್​ ಕೂಡ ಪ್ರವೇಶಿಸಿಲ್ಲ ಎಂದು ಹೇಳಿದರೆ. ಮತ್ತಷ್ಟು ಜನ ಮೇ 18ರ ಘಟನೆಯನ್ನು ಇವರು ಪರ್ಸನಲ್​ ಆಗಿ ತೆಗೆದುಕೊಂಡು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

2024ರ ಮೇ 18ರಂದು ಸಿಎಸ್​ಕೆ ಹಾಗೂ ಆರ್​ಸಿಬಿ ನಡುವಿನ ನಾಕೌಟ್​ ಪಂದ್ಯದಲ್ಲಿ ಬೆಂಗಳೂರು ತಂಡವು ಎದುರಾಳಿಗಳ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್​ ಪ್ರವೇಶಿಸಿತ್ತು. ಪಂದ್ಯದ ಬಳಿಕ ನಡೆದ ಬೆಳವಣಿಗೆಯಲ್ಲಿ ಸಿಎಸ್​ಕೆ ಆಟಗಾರರು ಎದುರಾಳಿ ತಂಡದವರಿಗೆ ಹ್ಯಾಂಡ್​ ಶೇಕ್​ ಮಾಡದೆ ತೆರಳಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net