ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಚಿತ್ರದ ಹಾಡು ಬಿಡುಗಡೆ

mng-12sep-middle class film
Published on


ಮಂಗಳೂರು : ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್‌ಟೈನ್ಮೆಂಟ್ ಅರ್ಪಿಸುವ, ಎಚ್‌ಪಿಆರ್ ಫಿಲಂಸ್ - ಹರಿಪ್ರಸಾದ್ ರೈ ಅವರ ಸಹಯೋಗದಲ್ಲಿ ನಿರ್ಮಾಣವಾದ ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಉಡುಪಿಯ ಕಲ್ಪನಾ ಥಿಯೇಟರ್‌ನಲ್ಲಿ ಜರಗಿತು.
ಉದ್ಯಮಿ ಮನೋಹರ್ ಶೆಟ್ಟಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು. ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ , ಹಿರಿಯ ರಂಗಕರ್ಮಿ
ವಿಜಯಕುಮಾರ್ ಕೊಡಿಯಾಲ್‌ಬೈಲ್ ಶುಭ ಹಾರೈಸಿದರು.
ಸಮಾಜ ಸೇವಕ ರವಿ ಕಟಪಾಡಿ, ಹುಲಿ ವೇಷ ಧರಿಸುವ ಸುಷ್ಮಾ ರಾಜ್, ಯೂ ಟ್ಯೂಬರ್ ಸಚಿನ್ ಶೆಟ್ಟಿ ಇವರುಗಳನು ಸನ್ಮಾನಿಸಲಾಯಿತು.
ಉದ್ಯಮಿ ರಮೇಶ್ ಕಾಂಚನ್, ಮಾಜಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಹರಿಪ್ರಸಾದ್ ರೈ, ದಿನೇಶ್ ಕಿಣಿ, ಲಯನ್ಸ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್, ಗಿರೀಶ್ ರಾವ್, ನಿರ್ಮಾಪಕ ಆನಂದ್ ಕುಂಪಲ, ನಿರ್ದೇಶಕ ರಾಹುಲ್ ಅಮೀನ್ ಸಹ ನಿರ್ಮಾಪಕರಾದ ಗಣೇಶ್ ಕೊಲ್ಯ, ಭರತ್ ಕುಮಾರ್, ನಿತಿನ್‌ರಾಜ್ ಶೆಟ್ಟಿ, ಪವನ್ ಕುಮಾರ್, ಅಶೋಕ್ ಹೆಗ್ಡೆ, ಲಯನ್ ಕಿಶೋರ್ ಡಿ ಶೆಟ್ಟಿ, ಚಿತ್ತರಂಜನ್ ಬೋಳೂರು, ತಮ್ಮ ಲಕ್ಷ್ಮಣ ವಿಜಯ್ ಕೊಡವೂರು, ನಿತಿನ್ ಶೆಟ್ಟಿ, ನಟಿ ಸಮತಾ ಅಮೀನ್, ನಟ ವಿನೀತ್ ಕುಮಾರ್, ಭೋಜರಾಜ ವಾಮಂಜೂರು, ಶ್ಯಾಮಿಲಿ, ಸಂದೀಪ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಹರ್ಷಿತ್ ಸೋಮೇಶ್ವರ, ರೋಷನ್, ದಯಾನಂದ ಬಂಟ್ವಾಳ, ರೂಪ ವರ್ಕಾಡಿ, ನವೀನ್ ಶೆಟ್ಟಿ ಉಪಸ್ಥಿತರಿದ್ದರು.
ತುಳು ಸಿನಿಮಾ ರಂಗದ ಇತಿಹಾಸದಲ್ಲೇ ಹಾಡೊಂದು ಸಿಂಗಲ್ ಥಿಯೇಟರ್‌ನಲ್ಲಿ ಬಿಡುಗಡೆಗೊಳ್ಳುತ್ತಿರುವುದು ಇದೇ ಮೊದಲನೇ ಬಾರಿಯಾಗಿದೆ. ಮಧುರಾಜ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net