ಸಾಂಬಾರು ಪಾತ್ರೆಗೆ ಬಿದ್ದು ಬಿಸಿಯೂಟದ ಅಡುಗೆ ಸಹಾಯಕಿ ಸಾವು!

Prameela
Published on

ಮಂಗಳೂರು: ಇದೊಂದು ದುರಂತ ಸಾವು ಎಂದರೂ ತಪ್ಪೇನಲ್ಲ. ಏಕೆಂದರೆ ಇಲ್ಲೊಬ್ಬರು ಬಿಸಿಯೂಟದ ಅಡುಗೆ ಸಹಾಯಕಿ ಸಾಂಬಾರು ಪಾತ್ರೆಗೆ ಬಿದ್ದು ಸಾವಿಗೀಡಾಗಿದ್ದಾರೆ. ಇಂಥದ್ದೊಂದು ಅವಘಡ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಂಭವಿಸಿದೆ.

ಅಗ್ನೇಸ್ ಪ್ರಮೀಳಾ ಡಿಸೋಜಾ (37) ಸಾವಿಗೀಡಾದ ಮಹಿಳೆ. ಇವರು ಪುತ್ತೂರಿನ ವಿಕ್ಟರ್ಸ್ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿದ್ದರು. ಅಡುಗೆ ತಯಾರಿ ಸಂದರ್ಭದ ಆಕಸ್ಮಿಕವಾಗಿ ಕಾಲು ಜಾರಿ ಸಾಂಬಾರು ಪಾತ್ರೆಗೆ ಬಿದ್ದಿದ್ದರು. ಈ ಅವಘಡ ಮೇ 30ರಂದು ನಡೆದಿತ್ತು.

ಅಂದು ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದಲೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದ್ದಾರೆ. ಈ ಸಂಬಂಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net