

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ
ಮೆಸ್ಕಾಂನಲ್ಲಿ ಪವರ್ಮನ್ಗಳ ಬಹಳಷ್ಟು ಕೊರತೆಯಿದೆ. ಗ್ರಾಮಾಂತರ ಉಪವಿಭಾಗದಲ್ಲೂ ಶೇ.50ರಷ್ಟು ಪವರ್ಮನ್ಗಳ ಹುದ್ದೆ ಖಾಲಿ ಇದೆ. ಇದರಿಂದಾಗಿ ಕೆಲವೊಂದು ಸಂದರ್ಭಗಳಲ್ಲಿ ವಿದ್ಯುತ್ ಗ್ರಾಹಕರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಈ ವಿಚಾರವನ್ನು ಮೆಸ್ಕಾಂ ಇಲಾಖೆ ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತರಬೇಕು. ಹಳೆಯ ವಿದ್ಯುತ್ ತಂತಿಗಳನ್ನು ಶೀಘ್ರವಾಗಿ ಬದಲಾವಣೆ ಮಾಡುವ ಜತೆಗೆ ಕೆಲವೊಂದು ಕಡೆಗಳಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಆಗ್ರಹ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ವ್ಯಕ್ತವಾಯಿತು.
ಮೆಸ್ಕಾಂ ಪುತ್ತೂರು ನಗರ ಉಪವಿಭಾಗ ಮತ್ತು ಪುತ್ತೂರು ಗ್ರಾಮಾಂತರ ಉಪ ವಿಭಾಗಮಟ್ಟದ ಜನಸಂಪರ್ಕ ಸಭೆ ಕುಂಬ್ರ ಗ್ರಾಮಾಂತರ ಉಪವಿಭಾಗದ ಕಚೇರಿಯಲ್ಲಿ ಮೆಸ್ಕಾಂ ಮಂಗಳೂರು ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೆ. ಅಧ್ಯಕ್ಷತೆಯಲ್ಲಿ ನಡೆಯಿತು.
ವಿದ್ಯುತ್ ಗ್ರಾಹಕರಾದ ಇಂದಿರಾ ಬಿ.ಕೆ., ಅಮರನಾಥ ಆಳ್ವ ಕರ್ನೂರು, ಜಯಂತಿ ಬಲ್ನಾಡು, ಚಂದ್ರಕಲಾ ನರಿಮೊಗರು, ಎ.ಶ್ರೀಧರ ಪಾಲ್ತಾಡಿ, ಅಣ್ಣಪ್ಪ ನಾಯ್ಕ, ಐತ್ತಪ್ಪ ಪೇರತ್ತಡ್ಕ, ಅಬ್ದುಲ್ ಅಜೀಜ್, ಕರುಣಾಕರ ಗೌಡ ಪಾಲ್ತಾಡಿ, ಕೇಶವ ಕೊಡಿಪ್ಪಾಡಿ, ಪದ್ಮಪ್ರಸಾದ್ ಜೈನ್, ಸೌಮ್ಯಾ ಎಂ., ಭರತ್ ಕೆ., ಪ್ರಕಾಶ್, ಅಬ್ದುಲ್ ಖಾದರ್ ಉಪ್ಪಿನಂಗಡಿ, ಮೋನಪ್ಪ ಗೌಡ ಬೆಳ್ಳಿಪ್ಪಾಡಿ, ಹರಿಣಾಕ್ಷಿ, ಚಂದ್ರಾವತಿ ರೈ ಕೆದಂಬಾಡಿ, ದಶರತ್ ರೈ, ಹರೀಂದ್ರನಾಥ ರೈ ದೋಳಾಡಿ, ಪ್ರವೀಣ್ ಡಿಂಬ್ರಿ ದೋಳ, ಪ್ರವೀಣ್ ಕುಮಾರ್ ಚೆನ್ನಾವರ, ಮೋನಪ್ಪ ಪೂಜಾರಿ ಕೆರೆಮಾರು, ರಾಧಾಕೃಷ್ಣ ರೆಂಜಲಾಡಿ ಮತ್ತಿತರರು ವಿದ್ಯುತ್ ಸಮಸ್ಯೆ-ಬೇಡಿಕೆಗಳನ್ನು ಸಭೆಯ ಮುಂದಿಟ್ಟರು.
ಮೆಸ್ಕಾಂ ಸಹಾಯಕ ಇಂಜಿನಿಯರ್ ಗುರುದೇವಿ ಮಂತ್ರಣ್ಣನವರ್, ನಗರ ಉಪವಿಭಾಗದ ಸಹಾಯಕ ಇಂಜಿನಿಯರ್ ಸ್ಮಿತಾ ಕೆ.ಎ., ಕಿರಿಯ ಸಹಾಯಕ ಇಂಜಿನಿಯರ್ಗಳಾದ ರವೀಂದ್ರ ಎಂ., ರಜಿನಿ, ಪುತ್ತು ಜೆ., ರಮೇಶ ಕೆ., ರಾಜೇಶ್ ಕುಮಾರ್ ಕೆ.ವಿ., ಕೃಷ್ಣಮೂರ್ತಿ ಕೆ., ವೀರ ನಾಯ್ಕ, ರಮೇಶ್ ಬಿ., ರಾಜೇಶ್ ಕೆ. ಮತ್ತಿತರರಿದ್ದರು. ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಎಚ್.ಶಿವಶಂಕರ್ ಸ್ವಾಗತಿಸಿದರು.
ಶೀಘ್ರವೇ ಸೂಕ್ತ ಕ್ರಮ
ಮೆಸ್ಕಾಂ ಇಲಾಖೆಯಲ್ಲಿ ಪವರ್ಮನ್ಗಳ ಕೊರತೆ ಇರುವ ಕುರಿತು ವಿದ್ಯುತ್ ಸಲಹಾ ಸಮಿತಿಯ ಯೋಗೀಶ್ ಸಾಮಾನಿ ಕೋಡಿಂಬಾಡಿ, ಗಿರಿಶಂಕರ ಸುಲಾಯ ಸವಣೂರು, ಇಕ್ಬಾಲ್ ಹುಸೇನ್ ಕೌಡಿಚ್ಚಾರು ಮಾತನಾಡಿ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಮೆಸ್ಕಾಂ ಮಂಗಳೂರು ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಭರವಸೆ ನೀಡಿದರು.
ಹಳೆಯ ತಂತಿಗಳ ಬದಲಾವಣೆಗೆ ಬೇಡಿಕೆ
ಬಹಳಷ್ಟು ಕಡೆಗಳಲ್ಲಿ ತೋಟದೊಳಗೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಹಳೆಯದಾಗಿದ್ದು, ಇದನ್ನು ಶೀಘ್ರವಾಗಿ ಬದಲಾಯಿಸುವಂತೆ ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಸೇರಿದಂತೆ ಹಲವು ಮಂದಿ ಗ್ರಾಹಕರು ಆಗ್ರಹಿಸಿದರು. ಕೆಲವೊಂದು ಕಡೆಗಳಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ವಿದ್ಯುತ್ ಗ್ರಾಹಕರು ಒತ್ತಾಯಿಸಿದರು. ಮೆಸ್ಕಾಂ ಪುತ್ತೂರು ಉಪ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ., ಗ್ರಾಮಾಂತರ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಎಚ್.ಶಿವಶಂಕರ್ ಗ್ರಾಹಕರ ಬೇಡಿಕೆ, ಸಮಸ್ಯೆಗಳಿಗೆ ಉತ್ತರಿಸಿದರು.
ಗ್ರಾಹಕರಿಂದ ಬಂದಿರುವ ಬೇಡಿಕೆ, ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇಲಾಖೆಯಿಂದ ಆಗಬೇಕಾದ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡುತ್ತೇವೆ. ಕೃಷ್ಣರಾಜ್ ಕೆ. ಮೆಸ್ಕಾಂ ಮಂಗಳೂರು ಅಧೀಕ್ಷಕ ಇಂಜಿನಿಯರ್ https://www.vijayavani.net/digital-arrest-in-the-name-of-a-police-officer-woman-cheated-of-rs-61-15-lakh https://www.vijayavani.net/college-student-raped-by-physics-biology-lecturers-and-their-friend