

ಮಂಗಳೂರು: ಮುತ್ತೂಟ್ ಫೈನಾನ್ಸ್ ಹಾಗೂ ಮೇರಿಹಿಲ್ ಪೃಥ್ವಿ ಸ್ವಯಂ ಸೇವಕರು ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಬುಧವಾರ ಗುರುನಗರ ವ್ಯಾಲಿ ಹಿಲ್ ಬಡಾವಣೆಯಲ್ಲಿ ವಿಶ್ವ ಪರಿಸರ ದಿನಾಚರಿಸಲಾಯಿತು.
‘ಭೂ ಮರುಸ್ಥಾಪನೆ, ಮರುಭೂಮೀಕರಣ ಹಾಗೂ ಬರ ತಡೆಯುವಿಕೆ’ ಎಂಬ ದ್ಯೇಯದಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇರಿಹಿಲ್ ಗುರುನಗರದ ವ್ಯಾಲಿ ಹಿಲ್ ಬಡಾವಣೆಯಲ್ಲಿ ಹಣ್ಣು ಕೊಡುವ ಸಸಿಗಳನ್ನು ನೆಡೆಲಾಯಿತು. ಮನಪಾ ಪರಿಸರ ವಿಭಾಗದ ಸಹ ಕಾರ್ಯಪಾಲಕಿ ದೀಪ್ತಿ ಎನ್., ಮುತ್ತೂಟ್ ಫೈನಾನ್ಸ್ ಮಂಗಳೂರು ಪ್ರಾಂತೀಯ ವ್ಯವಸ್ಥಾಪಕ ಪ್ರಶಾಂತ್ ನಾಯಕ್, ರೀಜನಲ್ ಮ್ಯಾನೇಜರ್ ಎಲಿಯಾಸ್ ಎಂ.ವಿ., ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೆಣೈ, ಮನಪಾ ಆರೋಗ್ಯ ನಿರೀಕ್ಷಕ ಅರುಣ್ ಕುಮಾರ್ ಮತ್ತು ಮುತ್ತೂಟ್ ಫೈನಾನ್ಸ್ ಕಾವೂರ್ ಮತ್ತು ಕದ್ರಿ ಶಾಖೆಯ ಮ್ಯಾನೇಜರ್ ಸುಷ್ಮಾ ವಿ.ಕೆ, ಚಂದ್ರಶೇಖರ್, ಮುತ್ತೂಟ್ ಫೈನಾನ್ಸ್ ಸಿಎಸ್‌ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್, ಕಸ್ವಿ ಹಸಿರು ದಿಬ್ಬಣದ ಕೇಶವ ರಾಮಕುಂಜ ಮತ್ತು ಶ್ರದ್ಧಾ, ಪ್ರಥ್ವಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಲೋಲಕ್ಷಿ ಫನಾರ್ಂಡಿಸ್, ಪರಿಸರ ಸಂಘದ ದಿನೇಶ್ ಕೋಡಿಯಾಲ್ ಬೈಲ್ ಮತ್ತು ಗುರುನಗರದ ವ್ಯಾಲಿ ಹಿಲ್ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ಸಸ್ಯ ಶ್ಯಾಮಲ ಸಂಸ್ಥೆಯಿಂದ ಪರಿಸರವಾದಿ ದಿನೇಶ್ ನಾಯಕ್, ಗ್ಲೋಬಲ್ ಗ್ರೀನ್ ಫೌಂಡೇಶನ್‌ನ ಮಾಧವ ಉಳ್ಳಾಲ್ ಮತ್ತು ಗ್ರೀನ್ ವಾರಿಯರ್ಸ್ ಮಂಗಳೂರು ಸಂಸ್ಥೆಯಿಂದ ಹನಿ ಎಚ್. ಆರ್. ಅವರನ್ನು ಪರಿಸರ ಸಂರಕ್ಷಣೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.