

ಬೆಂಗಳೂರು: "ಎಎಂಜಿ ಜಿಎಲ್ಇ 53 4ಮ್ಯಾಟಿಕ್ ಪ್ಲಸ್ ಕೂಪೆ" (AMG GLE 53 4MATIC+ Coupé) ಹೆಸರಿನ ನೂತನ ಕಾರನ್ನು ಮಾರಕಟ್ಟೆಗೆ ಪರಿಚಯಿಸುವ ಮೂಲಕ ಮರ್ಸಿಡಿಸ್ ಬೆಂಜ್ ಕಂಪನಿಯು ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಎಎಂಜಿ 53 ಸರಣಿಯನ್ನು ಬಿಡುಗಡೆ ಮಾಡಿದೆ.
ಮರ್ಸಿಡಿಸ್ ಬೆಂಜ್ ದೇಶದ ಅತಿದೊಡ್ಡ ಐಷಾರಾಮಿ ಕಾರು ತಯಾರಕ ಕಂಪನಿಯಾಗಿದ್ದು, "ಎಎಂಜಿ ಜಿಎಲ್ಇ 53 4 ಮ್ಯಾಟಿಕ್ ಪ್ಲಸ್ ಕೂಪೆ"ಯು ಜಿಎಲ್ಇಯ ಯಶಸ್ವಿ ಪೋರ್ಟ್ಫೋಲಿಯೊವನ್ನು ವಿಸ್ತರಿಸಲಿದೆ. ಇದು ಭಾರತದ ಎಎಂಜಿ ಜಿಎಲ್ಇ 43ರ ಇತ್ತೀಚಿನ ವರ್ಷನ್ ಆಗಿದೆ.
ಟಿವಿಎಸ್ ಸುಂದರಂ ಮೋಟರ್ಸ್ ಕಂಪನಿಯು ಎಲ್ಲ ನೂತನ ಎಎಂಜಿ ಜಿಎಲ್ಇ 53 ಸರಣಿಯನ್ನು ಬೆಂಗಳೂರಿನಲ್ಲಿರುವ ತಮ್ಮ ಎಎಂಜಿ ಪರ್ಫಾರ್ಮೆನ್ಸ್ ಕೇಂದ್ರದಲ್ಲಿ ಸೆ. 26ರಂದು ಉದ್ಘಾಟಿಸಿದೆ. ನಗರದ ಆಸಕ್ತರು ಹಾಗೂ ಟ್ರೆಂಡ್‌ಸೆಟ್ಟರ್‌ಗಳು ಇದೀಗ ಎಎಂಜಿ ಜಿಎಲ್ಇ 53ನೊಂದಿಗೆ ಹೊಸ ವಿನ್ಯಾಸದಲ್ಲಿ ಎಎಂಜಿ ಕಾರ್ಯಕ್ಷಮತೆ ಮತ್ತು ನೂತನ ತಂತ್ರಜ್ಞಾನವನ್ನು ಅನುಭವಿಸಬಹುದಾಗಿದೆ. ಆರು-ಸಿಲಿಂಡರ್ಗಳ ಕಾರ್ಯಕ್ಷಮತೆ ಮತ್ತು ರೇಸ್-ಬ್ರೆಡ್ ಡ್ರೈವಿಂಗ್ ಡೈನಾಮಿಕ್ಸ್ ಎಎಂಜಿ 53 ಶ್ರೇಣಿಯ ಮೂಲಾಧಾರಗಳಾಗಿವೆ.
ಎಎಂಜಿ ನೂತನ ಸರಣಿಯಲ್ಲಿ ಸ್ಲಿಪರಿ, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್+, ವೈಯಕ್ತಿಕ, ಟ್ರಯಲ್ ಮತ್ತು ಸ್ಯಾಂಡ್ ಎಂಬ ಏಳು ಡ್ರೈವ್ ಪ್ರೋಗ್ರಾಂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಉತ್ತಮ ಆಫ್-ರೋಡ್ ಸಾಮರ್ಥ್ಯಗಳು, ನವೀನ ಮತ್ತು ನೂತನ ತಂತ್ರಜ್ಞಾನಗಳು ಹಾಗೂ ಇಂಟಿಲಿಜೆಂಟ್ ಡ್ರೈವಿಂಗ್ ನೆರವು ವ್ಯವಸ್ಥೆಗಳೊಂದಿಗೆ ಸ್ಪೋರ್ಟಿ ಸೊಬಗು ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಎಎಂಜಿ ನೂತನ ಸರಣಿ ಹೊಂದಿದೆ ಎಂದು ಕಂಪನಿ ಹೇಳಿದೆ.
ಎಲ್ಲ ಹೊಸ ಜಿಎಲ್ಇ ಈಗ 300ಡಿ, 400ಡಿ, 450 ಮತ್ತು ಎಎಂಜಿ ಜಿಎಲ್ಇ 53 ಕೂಪೆ ರೂಪಾಂತರಗಳಲ್ಲಿ ಲಭ್ಯವಿದೆ. ಎರಡು ವರ್ಷಗಳವರೆಗೆ ಅನಿಮಿಯತ ಕಿ.ಮೀ.ವರೆಗೆ 92 ಸಾವಿರ ರೂ.ದಿಂದ ಆರಂಭವಾಗುವ ಮರ್ಸಿಡಿಸ್ನ ಎಎಂಜಿ ಜಿಎಲ್ಇ 53 4 ಮ್ಯಾಟಿಕ್ ಪ್ಲಸ್ ಕೂಪೆಯ ಸ್ಟಾರ್ ಈಜ್ ಸರ್ವೀಸ್ ಪ್ಯಾಕೇಜ್ ಲಭ್ಯವಿದೆ. ಮರ್ಸಿಡಿಸ್ನ ಎಎಂಜಿ ಜಿಎಲ್ಇ 53 4 ಮ್ಯಾಟಿಕ್ ಪ್ಲಸ್ ಕೂಪೆಯ ದರ 1.2 ಕೋಟಿ ರೂ. (ಎಕ್ಸ್ ಶೋರೂಮ್) ಇದೆ.
ಎಎಂಜಿ ನೂತನ ಸರಣಿಯ ಬಗ್ಗೆ ಹೆಚ್ಚು ತಿಳಿಯುವ ಆಸಕ್ತಿಯಿದ್ದಲ್ಲಿ ಸುಂದರಂ ಮೋಟರ್ಸ್ +91-9148155175 ಕರೆ ಮಾಡಬಹುದು ಅಥವಾ panchajanya.c@sundarammotors.com ಗೆ ಈಮೇಲ್ ಮಾಡಬಹುದು.
ಅಂದಹಾಗೆ ಸುಂದರಂ ಮೋಟಾರ್ಸ್, ಟಿ. ವಿ. ಸುಂದರಂ ಅಯ್ಯಂಗಾರ್ ಮತ್ತು ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಭಾಗವಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ಮರ್ಸಿಡಿಸ್ ಬೆಂಜ್ ಪ್ಯಾಸೆಂಜರ್ ಕಾರುಗಳ ಅಧಿಕೃತ ಡೀಲರ್ ಆಗಿದ್ದು, 60ಕ್ಕೂ ಹೆಚ್ಚು ವರ್ಷಗಳಿಂದ ಟಿವಿಎಸ್ ಸುಂದರಂ ಮೋಟರ್ಸ್ ಆಟೋ ಮೊಬೈಲ್ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದೆ. 2001ರಲ್ಲಿ ಕರ್ನಾಟಕ ಮತ್ತು 2003ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸುಂದರಂ ಮೋಟಾರ್ಸ್, ಮರ್ಸಿಡಿಸ್ ಬೆಂಜ್ ಡೀಲರ್ಶಿಪ್ ಆರಂಭಿಸಿತು. ವಿಶ್ವಾಸ, ಮೌಲ್ಯ ಮತ್ತು ಉತ್ತಮ ಸೇವೆಯಯಿಂದಾಗಿ ಸುಂದರಂ ಮೋಟರ್ಸ್ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದು, ತುಂಬಾ ಹೆಸರುವಾಸಿಯಾಗಿದೆ. ಎಲ್ಲ ಗ್ರಾಹಕರ ಸಂತೃಪ್ತಿಯಲ್ಲಿ ಸುಂದರಂ ಮೋಟರ್ಸ್ ನಂಬಿಕೆ ಇಟ್ಟಿದೆ ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಗುಣಮಟ್ಟದ ಮಾನದಂಡಗಳನ್ನು ಸುಧಾರಿಸಲು ನಿರಂತರ ಪ್ರಯತ್ನ ಮಾಡುತ್ತಿದೆ.
ಬೆಂಗಳೂರು, ಚೆನ್ನೈ, ಮಂಗಳೂರು, ಕೊಯಮತ್ತೂರು, ಮದುರೈ, ಸೇಲಂನಲ್ಲಿ ಮರ್ಸಿಡಿಸ್ ಬೆಂಜ್ನ ಸೇಲ್ಸ್ ಆ್ಯಂಡ್ ಸರ್ವೀಸ್ ಕೇಂದ್ರಗಳಿದ್ದು, ಎಎಂಜಿ ಪರ್ಫಾರ್ಮೆನ್ಸ್ ಕೇಂದ್ರವು ಬೆಂಗಳೂರಿನಲ್ಲಿದೆ.