ಮರ್ಸಿಡಿಸ್ ಬೆಂಜ್ ಜಿಎಲ್​ಸಿ ಕೂಪ್ ಅನಾವರಣ

Car
Published on

ಬೆಂಗಳೂರು: ಐಷಾರಾಮಿ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಜ್ ಮೇಡ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ 10ನೇ ಉತ್ಪನ್ನವಾಗಿ ಅತ್ಯಾಧುನಿಕ ವಿನ್ಯಾಸದ ಮರ್ಸಿಡಿಸ್ ಬೆಂಜ್ ಜಿಎಲ್​ಸಿ ಕೂಪ್ ಕಾರನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕಸ್ತೂರಬಾ ರಸ್ತೆಯಲ್ಲಿರುವ ಸುಂದರಂ ಮೋಟಾರ್ಸ್​ನಲ್ಲಿ ಕಾರನ್ನು ಅನಾವರಣಗೊಳಿಸಲಾಯಿತು.

ಭಾರತೀಯರಿಗಾಗಿ ಭಾರತದಲ್ಲೇ ತಯಾರಾದ ಉತ್ಪನ್ನಗಳ ಸರಣಿಯಲ್ಲಿ ಜಿಎಲ್​ಸಿ ಕೂಪ್ ವಾಹನ ಮೊದಲ ಬಾರಿಗೆ ಲಭ್ಯವಾಗುತ್ತಿದೆ. ಎಸ್​ಯುುವಿ ಕೂಪ್​ಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಪೂರೈಕೆ ಮಾಡಲು ಮರ್ಸಿಡಿಸ್ ಬೆಂಜ್ 300ಡಿ 4 ಮ್ಯಾಟಿಕ್ ಡೀಸೆಲ್ ಮತ್ತು 300 4 ಮ್ಯಾಟಿಕ್ ಪೆಟ್ರೋಲ್ ಕಾರುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಭಾರತ ವಿಭಾಗದ ಎಂಡಿ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಹೇಳಿದರು.

ವಿಶೇಷತೆಗಳು: ಹೊಸ ಜಿಎಲ್​ಸಿ ಕೂಪ್ ವಾಹನವು ಮರ್ಸಿಡಿಸ್ ಮಿ ಕನೆಕ್ಟ್ ಸೌಲಭ್ಯವನ್ನು ಹೊಂದಿದೆ. ರಿಮೋಟ್ ಲಾಕ್, ಅನ್​ಲಾಕ್, ಕಾರ್ ಲೊಕೇಟರ್, ಸ್ಪೀಡ್ ಮಾನಿಟರ್, ತುರ್ತು ಇ-ಕಾಲ್ ಮತ್ತಿತರ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇವೆಲ್ಲವನ್ನೂ ಗ್ರಾಹಕರ ಸ್ಮಾರ್ಟ್​ಫೋನ್ ಮೂಲಕವೇ ನಿಯಂತ್ರಿಸಬಹುದಾಗಿದೆ. ಹೊಸ ಪೀಳಿಗೆಯ ಟೆಲಿಮ್ಯಾಟಿಕ್ಸ್ ಹೊಂದಿದ್ದು, ಮರ್ಸಿಡೀಸ್ ಬೆಂಜ್ ಗ್ರಾಹಕ ಅನುಭವ (ಎನ್​ಟಿಜಿ 6.0) ಸೌಲಭ್ಯ, ವರ್ಚುವಲ್ ಅಸಿಸ್ಟೆಂಟ್ ಮತ್ತು ಇನ್ಪೋಟೇನ್ಮೆಂಟ್ ಸಿಸ್ಟಂಗಳನ್ನು ಹೊಂದಿದೆ.

# 300 4 ಮ್ಯಾಟಿಕ್ ಡೀಸೆಲ್ ಪೆಟ್ರೋಲ್ ಮಾದರಿ ಕಾರು # ಕಡಿಮೆ ಬೆಲೆಯಲ್ಲಿ 2 ವರ್ಷಗಳ ಸರ್ವೀಸ್ ಪ್ಯಾಕೇಜ್ ಎಕ್ಸ್ ಶೋರೂಂ ಬೆಲೆ

  • ಮರ್ಸಿಡಿಸ್ ಜಿಎಲ್​ಸಿ 300 4 ಮ್ಯಾಟಿಕ್ 62.70 ಲಕ್ಷ ರೂ.
  • ಮರ್ಸಿಡಿಸ್ ಜಿಎಲ್​ಸಿ 300ಡಿ 4 ಮ್ಯಾಟಿಕ್ 63.70 ಲಕ್ಷ ರೂ.

ತಾಂತ್ರಿಕ ವಿವರ

  • ಇಂಜಿನ್: ಬಿಎಸ್ 6 4 ಸಿಲಿಂಡರ್ (ಡೀಸೆಲ್)/ ಬಿಎಸ್ 6 4 ಸಿಲಿಂಡರ್ (ಪೆಟ್ರೋಲ್)
  • ಟ್ರಾನ್ಸ್​ಮಿಷನ್: 9ಜಿ-ಟ್ರಾನಿಕ್ ಆಟೋಮ್ಯಾಟಿಕ್
  • ಟಾರ್ಕ್: 500 ಎನ್​ಎಂ/370 ಎನ್​ಎಂ
  • ಗರಿಷ್ಠ ವೇಗ: ಗಂಟೆಗೆ 250 ಕಿ.ಮೀ., 0-100 ಕಿ.ಮೀ. ವೇಗ: 6.3 ಸೆಕೆಂಡ್
  • ಅಶ್ವಶಕ್ತಿ (ಕೆಡಬ್ಲ್ಯು) ಎಚ್​ಪಿ/ಆರ್​ಎಂಪಿ : 180 (245)/190 (258)
  • ಡ್ರೖೆವಿಂಗ್ ಸಿಸ್ಟಮ್ 4 ಮ್ಯಾಟಿಕ್
  • ಬ್ರೇಕಿಂಗ್: 4 ಚಕ್ರಗಳಿಗೂ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್
  • ಇಂಧನ ಕ್ಷಮತೆ: ಲೀಟರ್​ಗೆ 16.34 ಕಿ.ಮೀ./12.74

77 ಸಾವಿರ ರೂ.ಗಳಿಗೆ ಸರ್ವೀಸ್ ಪ್ಯಾಕೇಜ್

300ಡಿ 4 ಮ್ಯಾಟಿಕ್ ಕಾರಿಗೆ 77 ಸಾವಿರ ರೂ. ಪಾವತಿಸಿ ಅನಿಯಮಿತ ಕಿಲೋಮೀಟರ್​ವರೆಗೆ 2 ವರ್ಷಗಳ ಅವಧಿಗೆ ಸರ್ವೀಸ್ ಸೌಲಭ್ಯ ಪಡೆದುಕೊಳ್ಳಬಹುದು. ಜಿಎಲ್​ಸಿ 300 4 ಮ್ಯಾಟಿಕ್ ಕಾರಿಗೆ 67,300 ರೂ. ಪಾವತಿಸಿ ಎರಡು ವರ್ಷಗಳ ಅವಧಿಗೆ ಅನಿಯಮಿತ ಕಿಲೋಮೀಟರ್ ಸರ್ವೀಸ್ ಪ್ಯಾಕೇಜ್ ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net