

ಮೈಸೂರು: ರಾಜ್ಯ ಮಟ್ಟದ ಈಜು ಚಾಂಪಿಯನ್ ಶಿಪ್ನಲ್ಲಿ ಮೈಸೂರು ಮಾರ್ಲಿನ್ ಅಕ್ವಾಟಿಕ್ ಸೆಂಟರ್ನ ಈಜುಪಟುಗಳು ಶ್ರೇಷ್ಠ ಹಾಗೂ ಆಕರ್ಷಕ ಪ್ರದರ್ಶನ ನೀಡಿ, ದಕ್ಷಿಣ ವಲಯ ರಾಷ್ಟ್ರೀಯ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್ನಲ್ಲಿ ಜು.9ರಿಂದ 13ರವರೆಗೆ ನಡೆದ ಕರ್ನಾಟಕ ಈಜು ಸಂಘ ಆಯೋಜಿತ ಎನ್ಆರ್ಜೆ ರಾಜ್ಯ ಉಪ-ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್ ಶಿಪ್ನಲ್ಲಿ ಕೆ.ಪನಿಷ್ಕಾ ಹಾಗೂ ಪ್ರಪಣ್ಣ ಪ್ರಭು ಈ ಸಾಧನೆ ಮಾಡಿದ್ದಾರೆ.
ಐದು ದಿನಗಳ ಕಾಲ ನಡೆದ ಈ ಸ್ಪರ್ಧೆಯ ಬಾಲಕಿಯ ವಿಭಾಗದಲ್ಲಿ ಕೆ.ಪನಿಷ್ಕಾ ಒಂದು ಬೆಳ್ಳಿ ಸೇರಿದಂತೆ ನಾಲ್ಕು ಪದಕ ಪಡೆದರು. ಅವರು 100 ಮೀ.ಬಟರ್ ಫ್ಲೈನಲ್ಲಿ ದ್ವಿತೀಯ ಹಾಗೂ 100 ಮೀ.ಬ್ರೆಸ್ಟ್ ಸ್ಟ್ರೋಕ್, 200 ಮೀ.ಬ್ರೆಸ್ಟ್ ಸ್ಟ್ರೋಕ್, 200 ಮೀ.ಬಟರ್ ಫ್ಲೈನಲ್ಲಿ ತೃತೀಯ ಸ್ಥಾನ ಪಡೆದರು. ಪ್ರಪಣ್ಣ ಪ್ರಭು 200 ಮೀ.ಬ್ರೆಸ್ಟ್ ಸ್ಟ್ರೋಕ್ನಲ್ಲಿ ದಕ್ಷಿಣ ವಲಯ ರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಆಯ್ಕೆಯಾದರು. ಇವರು ಮೈಸೂರು ಮಾರ್ಲಿನ್ ಅಕ್ವಾಟಿಕ್ ಸೆಂಟರ್ ಮುಖ್ಯ ತರಬೇತುದಾರ ಮಹೇಶ್ ಬಳಿ ತರಬೇತಿ ಪಡೆಯುತ್ತಿದ್ದಾರೆ.