ಈ ಮೂರು ರಾಶಿಯ ಗಂಡಸರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs
Published on

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ರಾಶಿಯು ಆತನ ಭವಿಷ್ಯದ ಜೀವನ, ವಿಶಿಷ್ಟ ವ್ಯಕ್ತಿತ್ವ ಮತ್ತು ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಜನ್ಮ ರಾಶಿಯನ್ನು ವ್ಯಕ್ತಿಯ ಹುಟ್ಟಿದ ಗಳಿಗೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ.

ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.

ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಪುರುಷರು ಸ್ವಾಭಾವಿಕವಾಗಿಯೇ ಸುಳ್ಳುಗಳನ್ನು ಸತ್ಯದಂತೆ ಬಹಳ ನಿಖರವಾಗಿ ಹೇಳುವ ಸಾಮರ್ಥ್ಯವನ್ನು ಹೊಂದಿರುತ್ತಾರಂತೆ! ಹಾಗಾದರೆ, ಯಾವ ಪುರುಷ ರಾಶಿಚಕ್ರ ಚಿಹ್ನೆಗಳು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬುದನ್ನು ನಾವೀಗ ತಿಳಿಯೋಣ.

ತುಲಾ ರಾಶಿ

ತುಲಾ ರಾಶಿಯವರು ತುಂಬಾ ಆಕರ್ಷಕರು ಮತ್ತು ಸುಳ್ಳುಗಾರರು. ಅವರು ಇತರರೊಂದಿಗೆ ಸುಲಭವಾಗಿ ಸ್ನೇಹ ಬೆಳೆಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಕೆಲವೊಮ್ಮೆ ಇತರರನ್ನು ನೋಯಿಸದಿರಲು ಸುಳ್ಳು ಹೇಳುತ್ತಾರೆ ಆದರೆ, ಅವರ ಸುಳ್ಳುಗಳು ಯಾರನ್ನೂ ಮೋಸಗೊಳಿಸುವ ಉದ್ದೇಶವನ್ನು ಹೊಂದಿರುವುದಿಲ್ಲ. ಈ ರಾಶಿಚಕ್ರ ಚಿಹ್ನೆಯ ಪುರುಷರು ಸುಳ್ಳು ಹೇಳಿದರೆ, ಅದು ತುಂಬಾ ಸೊಗಸಾಗಿರುತ್ತದೆ ಮತ್ತು ಪರಿಪೂರ್ಣವಾಗಿರುತ್ತದೆ ಹಾಗೂ ಯಾರೂ ಅದನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಸ್ವಭಾವತಃ ನಿಗೂಢರಾಗಿರುತ್ತಾರೆ ಮತ್ತು ತಮ್ಮ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಈ ರಾಶಿಚಕ್ರ ಚಿಹ್ನೆಯ ಪುರುಷರು ತಮ್ಮ ವೈಯಕ್ತಿಕ ವಿಷಯಗಳನ್ನು ಗೌಪ್ಯವಾಗಿಡಲು ಬಹಳಷ್ಟು ಸುಳ್ಳು ಹೇಳುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ರಹಸ್ಯ ಶಕ್ತಿಯನ್ನು ಬಳಸಿಕೊಂಡು ಬೇರೆ ಯಾವುದೇ ರಾಶಿಯವರು ಮಾಡಲಾಗದ ರೀತಿಯಲ್ಲಿ ಸತ್ಯವನ್ನು ಕುಶಲತೆಯಿಂದ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಸುಳ್ಳು ಹೇಳುವುದರಲ್ಲಿ ಮಾತ್ರವಲ್ಲ, ರಹಸ್ಯಗಳನ್ನು ಇಟ್ಟುಕೊಳ್ಳುವುದರಲ್ಲಿಯೂ ನಿಪುಣರು.

ಕುಂಭ ರಾಶಿ

ಕುಂಭ ರಾಶಿಯವರು ಕೆಲವು ಕೆಲಸಗಳನ್ನು ವಿಚಿತ್ರ ಮತ್ತು ಮೂರ್ಖ ರೀತಿಯಲ್ಲಿ ಮಾಡುತ್ತಾರೆ. ಅವರ ಈ ಗುಣವು ಕೆಲವೊಮ್ಮೆ ಅವರನ್ನು ಬಹಳಷ್ಟು ಸುಳ್ಳು ಹೇಳುವಂತೆ ಮಾಡುತ್ತದೆ. ಅವರು ಏನನ್ನಾದರೂ ಇದ್ದ ಹಾಗೆ ಹೇಳುವ ಬದಲು ಆಸಕ್ತಿದಾಯಕವಾಗಿ ಹೇಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ಅವರ ಮಾತಿನಲ್ಲಿ ಸುಳ್ಳಿರುವುದು ಸಹಜ. ಆದರೆ, ಅವರು ಹೇಳುವ ಸುಳ್ಳುಗಳನ್ನು ಯಾರೂ ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಾಗದಂತೆ ಮಾಡುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net