

ಕೊಕ್ಕಡ: ಕೇಂದ್ರ ಸರ್ಕಾರದ ಅನುದಾನದಿಂದ ನಡೆಸಲ್ಪಡುವ ಮತ್ತು ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧೀನಕ್ಕೆ ಒಳಪಟ್ಟ ರೈತ ಉತ್ಪಾದಕರ ಕಂಪನಿ ವತಿಯಿಂದ ಮತ್ತು ಸೃಷ್ಟಿ ಸಂಜೀವಿನಿ ಒಕ್ಕೂಟ ಶಿಶಿಲ ಸಹಭಾಗಿತ್ವದಲ್ಲಿ ರೈತರ ಸದಸ್ಯತ್ವ ನೋಂದಣಿ ಮತ್ತು ರೈತರಿಗೆ ಮಾಹಿತಿ ಕಾರ್ಯಕ್ರಮ ಶಿಶಿಲ ಗ್ರಾಮಪಂಚಾಯಿತಿಯಲ್ಲಿ ಜರುಗಿತು.
ಗ್ರಾಪಂ ಅಧ್ಯಕ್ಷ ಸುಧಿನ್ ಉದ್ಘಾಟಿಸಿದರು. ಬೆಳ್ತಂಗಡಿ ತಾಲೂಕು ವಲಯ ಮೇಲ್ವಿಚಾರಕ ಜಯಾನಂದ್, ಉಜಿರೆ ರೈತ ಉತ್ಪಾದಕರ ಸಂಘ ನಿರ್ದೇಶಕ ಜಯಂತ್ ಮತ್ತು ಕಾರ್ಯನಿರ್ವಣಾಧಿಕಾರಿ ದಿನೇಶ್, ಸೃಷ್ಟಿ ಸಂಜೀವಿನಿ ವಲಯ ಮೇಲ್ವಿಚಾರಕಿ ವೀಣಾಶ್ರೀ, ಶಿಶಿಲ ಸೃಷ್ಟಿ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಗಿರಿಜಾ ಕೆದಿಲಾಯ ಮತ್ತು ಶಿಶಿಲ ಗ್ರಾಮ ಕೃಷಿ ಸಖಿ ವಸಂತಿ ಉಪಸ್ಥಿತರಿದ್ದರು. ಸಂಜೀವಿನಿಯ ಶಾರದಾ ಸ್ವಾಗತಿಸಿ, ಕೃಷಿ ಸಖಿ ಕಾರ್ಯಕ್ರಮ ನಿರೂಪಿಸಿ, ಶಾರದಾ ವಂದಿಸಿದರು. ಸಂಜೀವಿನಿಯ ಭಾಗೀರಥಿ ಮತ್ತು ಶಶಿಕಲಾ ಹಾಗೂ ಊರಿನ ರೈತರು ಭಾಗಿಯಾದರು.